ಗಂಟಲು ನೋವು ನಿವಾರಣೆಗೆ ಇಲ್ಲಿದೆ ಮನೆಮದ್ದು..!

ಗಂಟಲು ನೋವು ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿಯೂ ಎಲ್ಲರನ್ನೂ ಕಾಡುವ ದೊಡ್ಡ ಸಮಸ್ಯೆಯಾಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಕಾಣಿಸಿಕೊಳ್ಳುವ ಈ ನೋವಿನ ನಿವಾರಣೆಗೆ ನಾವು ಏನೆಲ್ಲಾ ಕಸರತ್ತನ್ನೆ ಮಾಡುತ್ತೇವೆ. ಕೊನೆಗೆ ನೊವು ಗುಣವಾಗದೇ ಇದ್ದಾಗ ಡಾಕ್ಟರ್ ಬಳಿ ಹೋಗಿ ಇಂಗ್ಲಿಷ್ ಮಡಿಸಿನ್ಸ್ಗಳ ಮೊರೆ ಹೋಗುತ್ತೇವೆ. ಇದರಿಂದ ಇನ್ನಷ್ಟು ಆರೋಗ್ಯ ಹದಗೆಡುತ್ತದೆ. ಇದರ ಬದಲಾಗಿ ಮನೆಮದ್ದನ್ನು ಮಾಡುವುದರಿಂದ ಬಹಳ ಸುಲಭವಾಗಿ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೇ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದಾಗಿದೆ.

ತಣ್ಣಗಿನ ನೀರು ಅಥವಾ ಇತರ ಪಾನೀಯಗಳನ್ನು ಒಂದೆರಡು ದಿನ ಸೇವಿಸದಿರಿ. ಸಾಧ್ಯವಾದಷ್ಟು ಬಿಸಿ ಚಹಾ, ನೀರು, ಉಪಹಾರ, ಊಟ ತಿನ್ನಿ. ಒಂದು ಇಂಚು ಗಾತ್ರದ ಹಸಿ ಶುಂಠಿ ತುಂಡನ್ನು ನೀರಿಗೆ ಹಾಕಿ ಕುದಿಸಿ. ನಾಲ್ಕು ಕಾಳುಮೆಣಸು ಜಜ್ಜಿ ಹಾಕಿ. ಹತ್ತು ನಿಮಿಷ ಕುದಿಸಿ. ಕೆಳಗಿಳಿಸಿ ಸೋಸಿ. ಬಿಸಿ ಇರುವಂತೆಯೇ ಕುಡಿಯಬೇಕು. ಕೆಲವೇ ಗಂಟೆಗಳಲ್ಲಿ ನಿಮ್ಮ ಗಂಟಲು ನೋವು ದೂರವಾಗುತ್ತದೆ. ಇದಕ್ಕೆ ಚಿಟಿಕೆ ಅರಿಶಿನ ಹಾಕಿಯೂ ಸೇವಿಸಬಹುದು. ಸಿಹಿ ಬೇಕು ಎನ್ನುವವರು ಬೆಲ್ಲದ ಬದಲಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕುಡಿಯಿರಿ. ಗಂಟಲು ನೋವು ಹಾಗೂ ಶೀತದ ಮತ್ತಿತರ ಲಕ್ಷಣಗಳು ಬಹುಬೇಗ ದೂರವಾಗುತ್ತವೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಉಪ್ಪುನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಓಡಿ ಹೋಗುತ್ತದೆ. ಈ ರೀತಿಯಾದಂತಹ ಸಿಂಪಲ್ ಟಿಪ್ಸ್ಗಳನ್ನ ಉಪಯೋಗಿಸಿ ಗಂಟಲು ನೋವನ್ನ ಹೋಗಲಾಡಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!