ವಿಧಾನ ಸೌಧ, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ವಿಜಯೋತ್ಸವ: 15 ಕೋಟಿಗೂ ಅಧಿಕ ಹಣ ಖರ್ಚು..?

ಬೆಂಗಳೂರು: ಸತತ 18 ವರ್ಷಗಳಲ್ಲಿ ಮೊದಲ ಬಾರಿಗೆ ಆರ್‌ಸಿಬಿ ಈ ಬಾರಿ ಕಪ್‌ ತಮ್ಮದಾಗಿಸಿಕೊಂಡಿತು. ಆರ್‌ಸಿಬಿ ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಆರ್‌ಸಿಬಿ ಅಭಿಮಾನಿಗಳಿಗಾಗಿ ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವವನ್ನು ಆಚರಿಸಿದ್ದು, ಇದಕ್ಕಾಗಿ ಸುಮಾರು ೧೫ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿರುವುದಾಗಿ ತಿಳಿದುಬಂದಿದೆ.

ಐಪಿಎಲ್‌ ನ ಇವೆಂಟ್‌ ಮ್ಯಾನೇಜ್‌ಮೆಂಟ್‌ ಜವಾಬ್ದಾರಿ ಹೊತ್ತಿರುವ ಡಿಎನ್‌ಎ ಎಂಟರ್‌ಟೈನ್ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಯೇ ವಿಜಯೋತ್ಸವ ಕಾರ್ಯಕ್ರಮದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿತ್ತು. ವರದಿಗಳ ಪ್ರಕಾರ ಈ ಕಂಪೆನಿ ರಾಜ್ಯದ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳಿಗೆ ಸೇರಿದ್ದು ಎನ್ನಲಾಗಿದೆ. ಮೊದಲಿಗೆ ವಿಜಯೋತ್ಸವವನ್ನು ಶನಿವಾರ ಹಮ್ಮಿಕೊಳ್ಳಬೇಕು ಎಂದು ಯೋಜಿಸಲಾಗಿತ್ತು. ಆದರೆ, ಪ್ರಮುಖ ಸಚಿವರೊಬ್ಬರ ಒತ್ತಡದ ಕಾರಣ ತರಾತುರಿಯಲ್ಲಿ ಬುಧವಾರವೇ ನಿಗಧಿ ಮಾಡಲಾಯಿತು. ಈ ಹಿನ್ನೆಲೆ ಕ್ರೀಡಾಂಗಣ ಮತ್ತು ವಿಧಾನಸೌಧದ ಬಳಿ ಸೇರಬಹುದಾದ ಜನಸಂಕಯೆ ಮತ್ತು ಅದನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂದಾಜಿಸಲು ಡಿಎನ್‌ಎ ಸಂಸ್ಥೆಯು ಎಡವಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಭೀಕರ ಕಾಲ್ತುಳಿತ ಸಂಬವಿಸಿ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ವಿಜಯೋತ್ಸವದ ಸಂಧರ್ಭದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿಗೆ ಸಂಬಂಧಿಸಿದಂತೆ ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸೆಲ್‌, ಡಿಎನ್‌ಎ ಮ್ಯಾನೆಂಜ್‌ಮೆಂಟ್‌ ಸಿಬ್ಬಂದಿ ಸುನಿಲ್‌ ಮ್ಯಾಥ್ಯು, ಕಿರಣ್‌ ಮತ್ತು ಸುಮಂತ್‌ ಎನ್ನುವವರನ್ನು ಕೇಂದ್ರ ಅಪರಾಧ ದಳ ಹಾಗೂ ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!