ಎಸ್ ಐ ಓ ವತಿಯಿಂದ ನೂತನ ಎಸ್‌ಪಿ ಹರಿರಾಮ್ ಶಂಕರ್ ಗೆ ಅಭಿನಂದನೆ
ಉಡುಪಿ: ಎಸ್ ಐ ಓ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಎಸ್ ಐ ಓ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಲಾಯಿತು. ವಿದ್ಯಾರ್ಥಿ ಯುವ ಸಮೂಹದ ನಡುವೆ ಮಾದಕ ದ್ರವ್ಯ ,ಅಫಿಮು , ಗಾಂಜಾ ವಿಪರಿತವಾಗಿ ಹರಿದಾಡುತಿದ್ದು , ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ ಸಾರುವಂತಹ ಭಾಷಣಗಳು ಮತ್ತು ಪೋಸ್ಟರ್ ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಐ ಓ ವಿದ್ಯಾರ್ಥಿ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಯಾಸೀನ್ ಮನ್ನಾ , ಜಿಲ್ಲಾ ಕಾರ್ಯದರ್ಶಿಗಳಾದ ಸಮೀರ್ ತೀರ್ಥಹಳ್ಳಿ, ಅದ್ನಾನ್ , ನಿಹಾಲ್ ಮತ್ತು ಸದಸ್ಯರಾದ ಅಯಾನ್ ಮಲ್ಪೆ, ಇಫಾಜ಼್ ಉಪಸ್ಥಿತರಿದ್ದರು.





