ಸರ್ಕಾರದ ಗಡೀಪಾರು ಕ್ರಮ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಅರುಣ್‌ ಕುಮಾರ್‌ ಪುತ್ತಿಲ

ಬೆಂಗಳೂರು: ಗಡೀಪಾರು ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ವಿಭಾಗದ ಉಪವಿಭಾಗಾಧಿಕಾರಿ ಜಾರಿ ಮಾಡಿರುವ ನೋಟಿಸ್‌ ಅನ್ನು ರದ್ದು ಪಡಿಸುವಂತೆ ಕೋರಿ ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈಯವರ ಒತ್ತಾಯಕ್ಕೆ ಮಣಿದು ತನ್ನನ್ನು ಕಲಬುರಗಿಗೆ ಗಡೀಪಾರು ಮಾಡಲು ಸರ್ಕಾರ ಮುಂದಾಗಿದೆ ಎಂದು ಅರುಣ್‌ ಕುಮಾರ್‌ ಪುತ್ತಿಲ ವರು ಆರೋಪಿಸಿದ್ದಾರೆ. ಈ ಕುರಿತು ಅರ್ಜಿಯಲ್ಲಿ ನಮೂದಿಸಿರುವ ಅವರು, ಶೋಕಾಸ್‌ ನೋಟೀಸ್‌ ನಲ್ಲಿ ಉಲ್ಲೇಖಿಸಿರುವ ತಮ್ಮ ವಿರುದ್ಧದ ಪ್ರಕರಣಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಕೆಲವು ಖುಲಾಸೆಗೊಂಡಿದೆ. ಆದರೂ ಪುತ್ತೂರು ಇನ್‌ಸ್ಪೆಕ್ಟರ್‌ ವರದಿ ಆಧರಿಸಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!