ಅದಾನಿ ಗ್ರೂಪ್ ನಲ್ಲಿ ಎಲ್‌ಐಸಿ ಹೂಡಿಕೆ: ಟ್ವೀಟ್ ಮೂಲ ರಾಹುಲ್ ಗಾಂಧಿ ಅಸಮಾಧಾನ
ಹೊಸದಿಲ್ಲಿ: ಅದಾನಿ ಗ್ರೂಪ್ ನಲ್ಲಿ ಎಲ್‌ಐಸಿ ಹೂಡಿಕೆಯ ಕುರಿತು ಟೀಕಿಸಿರುವ ರಾಹುಲ್ ಗಾಂಧಿ, ಪ್ರಿಮಿಯಂ ನಿಮ್ಮದು ಲಾಭ ಅದಾನಿಯದು ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ʼಹಣ ನಿಮ್ಮದು, ಪಾಲಿಸಿ ನಿಮ್ಮದು, ಪ್ರೀಮಿಯಂ ನಿಮ್ಮದು, ಭದ್ರತೆ ನಿಮ್ಮದು, ಅನುಕೂಲ ಲಾಭ ಅದಾನಿಗೆ ಎಂದು ಹೇಳಿದ್ದಾರೆ. ಸಾರ್ವಜನಿಕರ ಹಣವನ್ನು ಖಾಸಗಿ ಸಂಸ್ಥೆಗಳ ಲಾಭಕ್ಕಾಗಿ ಬಳಸಲಾಗುತ್ತದೆ ಎಂದು ಟೀಕಿಸಿದ್ದಾರೆ.
ಅದಾನಿ ಪೋರ್ಟ್ಸ್ ೧೫ ವರ್ಷಗಳ ನಾನ್-ಕನ್ವರ್ಟಿಬಲ್ ಡಿಬೆಂಚರ್ ಮೂಲಕ ಎಲ್‌ಐಸಿಯಿಂದ ನಿಧಿಯನ್ನು ಸಂಗ್ರಹಿಸಿರುವ ಕುರಿತು ಕಂಪೆನಿಯು ಹೇಳಿಕೆ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಎಲ್‌ಐಸಿಯು ವಿಮಾ ಪ್ರಿಮಿಯಮ್ ಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಸಿರುವ ಹಣವನ್ನು ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.





