ಅಜೀರ್ಣ ಸಮಸ್ಯೆ ನಿವಾರಣೆಗೆ ಅನಾನಸ್ ಹಣ್ಣು ರಾಮಬಾಣ..!

ಅನಾನಸ್‌ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುವ ಈ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಇದು ಕೇವಲ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲಆರೋಗ್ಯವನ್ನೂ ವೃದ್ಧಿಸುತ್ತದೆ.

ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ಮನೆಯಲ್ಲಿಯೇ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ. ಅನಾನಸು ಹಸಿಯಾಗಿಯೂ, ಸಾಂಬಾರ್‌ ರೂಪದಲ್ಲಿಯೂ ಸೇವಿಸಬಹುದಾದ ಅಪರೂಪದ ಹಣ್ಣಾಗಿದೆ. ಆದರೆ ಬಹಳ ಮುಖ್ಯವಾಗಿ ನಾವು ಗಮನದಲ್ಲಿಡಬೇಕಾದ ಅಂಶ ಎಂದರೆ ಗರ್ಭಿಣಿ ಹೆಂಗಸರು ಈ ಅನಾನಸ್‌ಅನ್ನು ಸೇವನೆ ಮಾಡಲೇಬಾರದು. ಇದನ್ನು ಸ್ವಲ್ಪಕೂಡ ಸೇವಿಸಬಾರದು. ಇದರಿಂದ ಗರ್ಭಪಾತವಾಗುವ ಸಂಭವವೇ ಹೆಚ್ಚು. ಹೀಗಾಗಿ ಗರ್ಭಿಣಿ ಹೆಂಗಸರನ್ನು ಹೊರತುಪಡಿಸಿ ಸಾಮಾನ್ಯರಿಗೆ ಈ ಅನಾನಸ್ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಮುಂದಿನ ಮಾಹಿತಿ ಓದಿ..

ಈ ಅನಾನಸ್ ಹಣ್ಣು ಮೆದುಳಿಗೆ ಅಗತ್ಯವಾದ ಮ್ಯಾಂಗನಿಸ್, ಗ್ಲುಕೋಸ್ ನಂತಹ ಅಂಶಗಳನ್ನು ಒಳಗೊಂಡಿದೆ.ಊಟವಾದ ನಂತರ ಅನಾನಸ್ ಹಣ್ಣಿಗೆ ಸ್ವಲ್ಪ ಕರಿಮೆಣಸಿನ ಪುಡಿ ಉದುರಿಸಿ ತಿನ್ನುವುದರಿಂದ ಅಜೀರ್ಣ ಸಮಸ್ಯೆದೂರವಾಗುತ್ತದೆ.

ಈ ಹಣ್ಣಿನ ನಿಯಮಿತ ಸೇವನೆಯಿಂದ ಗಂಟಲು ಬೇನೆಯಿಂದ ಬಿಡುಗಡೆ ಹೊಂದಬಹುದಾಗಿದೆ. ಹೃದಯದೌರ್ಬಲ್ಯ, ಪಿತ್ತಕೋಶ ಊತ, ಮೂತ್ರ ಕಟ್ಟುವಿಕೆ, ಕಣ್ಣಿನ ಸುತ್ತ ಊದುವಿಕೆ ಮುಂತಾದ ಸಮಸ್ಯೆಗಳನ್ನು ಈ ಅನಾನಸ್ ಹಣ್ಣನ್ನು ಸೇವಿಸುವುದರಿಂದ ನಿವಾರಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!