ಒಣದ್ರಾಕ್ಷಿಯನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ..

ತುಂಬಾ ಜನರು ನಾವು ಚೆನ್ನಾಗಿರಬೇಕು ಫಿಟ್ ಆಗಿರಬೇಕು ಎಂದು ಮೆಡಿಕಲ್ ನಲ್ಲಿ ಸಿಗುವ ಮಾತ್ರೆಗಳನ್ನು ತಿನ್ನುತ್ತಾರೆ. ಆದರೆ ಇದರಿಂದ ಅವರಿಗೆ ಸೈಡ್ ಎಫೆಕ್ಟ್ ಉಂಟಾಗುತ್ತದೆ. ದೇಹವು ಅನಾರೋಗ್ಯದಿಂದ ಕೂಡಿರುತ್ತದೆ. ಆದ್ದರಿಂದ ಫಿಟ್ ಆಗಿರಲು ಡ್ರೈ ಫ್ರೂಟ್ಸ್ ಅನ್ನು ನೆನೆ ಇಟ್ಟು ತಿನ್ನುವುದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಅದರಲ್ಲೂ ಒಣ ದ್ರಾಕ್ಷಿಯನ್ನು ನೆನೆಸಿಟ್ಟು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೆಲವರು ಒಣ ದ್ರಾಕ್ಷಿಯನ್ನು ಖಾಲಿ ಬಾಯಿಗೆ ತಿನ್ನುತ್ತಾರೆ. ಹೀಗೆ ತಿನ್ನುವುದರಿಂದ ಇದರಲ್ಲಿನ ವಿಟಮಿನ್ ನಮಗೆ ಹೆಚ್ಚಾಗಿ ಸಿಗುವುದಿಲ್ಲ. ಒಣ ದ್ರಾಕ್ಷಿಯು ನಿಮ್ಮ ದೇಹದ ತೂಕವನ್ನು ನಿಯಂತ್ರಿಸಿ ಸಹಾಯ ಮಾಡುತ್ತದೆ. ಹಾಗೂ ಒಮ್ಮೆ ಡ್ರೈ ಫ್ರೂಟ್ಸ್ ಅನ್ನು ತಿಂದರೆ ದೀರ್ಘ ಕಾಲದವರೆಗೂ ಹಸಿವನ್ನು ತಡೆಯುತ್ತದೆ.

ಒಣ ದ್ರಾಕ್ಷಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಅಂದರೆ ಇದರಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಹಾಗೆ ಇದನ್ನು ನೀರಿನಲ್ಲಿ ನೆನೆಸಿಟ್ಟು ತಿಂದರೆ ಮಲಬದ್ಧತೆ ಸಂಪೂರ್ಣವಾಗಿ ಗುಣವಾಗುತ್ತದೆ. ಇದರಿಂದ ನಿಮ್ಮ ಜೀರ್ಣಶಕ್ತಿಯೂ ಸಹ ವೃದ್ಧಿಯಾಗುತ್ತದೆ. ಕೆಲವರಿಗೆ ರಕ್ತದೊತ್ತಡ ಇರುತ್ತದೆ ಇಂಥವರಿಗೆ ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ತುಂಬಾ ಪ್ರಯೋಜನವಿದೆ. ಈ ಒಣ ದ್ರಾಕ್ಷಿಯ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಒಣದ್ರಾಕ್ಷಿ ನೆನೆಸಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಈ ಒಣ ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಅಂಶವು ಕೂಡ ಇದೆ. ಇದರಿಂದ ಪೌಷ್ಟಿಕಾಂಶಗಳ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಮೂಳೆಗಳ ಸಾಂದ್ರತೆ ಕೂಡ ಹೆಚ್ಚಾಗುತ್ತದೆ. ಈ ಒಣ ದ್ರಾಕ್ಷಿ ಸೇವನೆಯಿಂದ ಬಾಯಿಯಲ್ಲಿ ಬರುವ ದುರ್ವಾಸನೆ ಕೂಡ ದೂರವಾಗುತ್ತದೆ. ನಿಮಿತವಾಗಿ ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.

2 thoughts on “ಒಣದ್ರಾಕ್ಷಿಯನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ..

  1. Your update are very good. We gwt quickest updates. Please continue good work being by your team.

  2. Your update are very good. Your reportable very interesting particularly investigative substance. Keep it up.

Leave a Reply

Your email address will not be published. Required fields are marked *

error: Content is protected !!