ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ: ಪತಿ, ಅತ್ತೆ ಮೇಲೆ ಶಂಕೆ..!

ಮಂಗಳೂರು: ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಗರ ಹೊರವಲಯದ ಕುಡುಪು ಗ್ರಾಮದ ಪಾಲ್ದನೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಲ್ಲವಿ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ಕೆಯ ಪತಿ ಹಾಗೂ ಅತ್ತೆಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಮೂರು ತಿಂಗಳಿಂದ ಪಲ್ಲವಿ ತನ್ನ ಪತಿ ನವೀನ್‌ ಹಾಗೂ ಅತ್ತೆ ಶಾಂತಾ ಅವರೊಂದಿಗೆ ಪಾಲ್ದನೆಯ ಕರುಣಾಕರ ಶೆಟ್ಟಿ ಎಂಬುವವರ ಮನೆಯ ಮಹಡಿಯಲ್ಲಿ ಬಾಡಿಗೆಗೆ ವಾಸವಾಗಿದ್ದರು.ನವೀನ್‌ ನಿತ್ಯವೂ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಮನೆಯ ಹಾಲ್‌ ನಲ್ಲಿ ಹಾಸಿಗೆಯ ಮೇಲೆ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಪಲ್ಲವಿಯ ಮೇತದೇಹ ರವಿವಾರ ಪತ್ತೆಯಾಗಿದ್ದು, ಎರಡು ಕಣ್ಣುಗಳ ಬಳಿ ಗುದ್ದಿದ ಗಾಯವಿತ್ತು, ರಕ್ತ ಕಪ್ಪಾಗಿತ್ತು, ಕುತ್ತಿಗೆ ಮತ್ತು ಮುಖದಲ್ಲಿ ಪರಚಿದ ಗಾಯಗಳಾಗಿದ್ದು, ಬಾಯಲ್ಲಿ ನೊರೆ ಬಂದಿತ್ತು ಎನ್ನಲಾಗಿದೆ. ಆಕೆಯ ಪತಿ ಮತ್ತು ಅತ್ತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯ ಬಳಿಕ ಆಕೆಯ ಪತಿ ನವೀನ ತಲೆಮರೆಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಅತ್ತೆ ಬಳಿ ವಿಚಾರಿಸಿದಾಗ ತನಗೆ ಏನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಮಂಗಳೂರು ಗ್ರಾಮಾಂತರ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!