ಸ್ಕೂಟರ್‌ಗೆ ಕೆಎಎಸ್‌ಆರ್‌ಟಿಸಿ ಡಿಕ್ಕಿ: ಸವಾರ ಮೃತ್ಯು

ಬಂಟ್ವಾಳ: ಓವರ್‌ ಟೇಕ್‌ ಮಾಡುವ ಭರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸ್ಕೂಟರ್‌ ವೊಂದಕ್ಕೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಮಂಗಳೂರಿನ ಬಂಟ್ವಾಳ ತಾಲೂಕಿನ ನೆಹರೂ ನಗರದಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಮಂಗಳೂರು ನಿವಾಸಿ ಅಲಿಸ್ಟರ್‌ ಡಿಸೋಜ(24) ಎಂದು ಗುರುತಿಸಲಾಗಿದೆ. ವಿಟ್ಲದಲ್ಲಿ ನಡೆದ ಗೃಹಪ್ರವೇಶವನ್ನು ಮುಗಿಸಿಕೊಂಡು ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಓವರ್‌ ಟೇಕ್‌ ಮಾಡುವ ಭರದಲ್ಲಿ ಸ್ಕೂಟರ್‌ ಗೆ ಡಿಕ್ಕಿ ಹೊಡೆದಿದೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!