ಪಪ್ಪಾಯ ಕೊಕೊನಟ್ ಬರ್ಫಿ
ಪಪ್ಪಾಯ ಆರೋಗ್ಯದಾಯಕ ಹಣ್ಣು, ಈ ಹಣ್ಣಿನಲ್ಲಿ ಅತಿ ಹೆಚ್ಚು ಪೋಷಕಾಂಶಗಳು ಇರುವ ಹಣ್ಣಾಗಿದ್ದು ಇದರಿಂದ ಪಾಯಸ ,ಜ್ಯೂಸು ಮಾಡುವುದು ಸರ್ವೇ ಸಾಮಾನ್ಯ ಆದರೆ ಇದರಿನ ಬರ್ಫಿಯನ್ನು ಮಾಡಬಹುದು
ಬೇಕಾಗುವ ಸಾಮಗ್ರಿಗಳು:
ಪಪ್ಪಾಯಿ ಹಣ್ಣು – 2 ಕಪ್
ತೆಂಗಿನ ತುರಿ – 2 ಕಪ್
ಸಕ್ಕರೆ – 4 ಕಪ್
ಹಾಲಿನ ಪುಡಿ -1/4 ಕಪ್
ಏಲಕ್ಕಿ ಪುಡಿ – ಸ್ವಲ್ಪ
ಡ್ರೈ ಫ್ರೂಟ್ಸ್
ತುಪ್ಪ – 1/2 ಕಪ್
ಮಾಡುವ ವಿಧಾನ :
ಒಂದು ಮಿಕ್ಸಿ ಜಾರಿಗೆ ತೆಂಗಿನ ತುರಿ ಹಾಗೂ ಪಪ್ಪಾಯಿ ಹಣ್ಣಿನ ಹೋಳುಗಳನ್ನು ಹಾಕಿ ನೀರು ಸೇರಿಸದೆ ಚೆನ್ನಾಗಿ ರುಬ್ಬಿ. ನಂತರ ಸಕ್ಕರೆ ಸೇರಿಸಿ ಮತ್ತೊಮ್ಮೆ ನುಣ್ಣಗೆ ರುಬ್ಬಿಕೊಳ್ಳಿ.
ದಪ್ಪ ತಳದ ಪಾತ್ರೆಗೆ ಸ್ವಲ್ಪ ತುಪ್ಪಹಾಕಿ , ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್ ಹಾಕಿ ಹುರಿದುತೆಗೆದಿಡಿ.
ನಂತರ ಅದೇ ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಹಾಕಿ ಆಗಾಗ ತುಪ್ಪ ಹಾಕುತ್ತಾ ತಿರುವಿ. ಅದು ಗಟ್ಟಿಯಾಗುವವರೆಗೆ ಕೈಯಾಡಿಸುತ್ತ ಇರಿ. ನಂತರ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್, ಏಲಕ್ಕಿ ಪುಡಿ, ಹಾಲಿನ ಪುಡಿ ಹಾಕಬೇಕು. ಮಿಶ್ರಣ ಬರ್ಫಿ ಹದಕ್ಕೆ ಬಂದಾಗ ಒಂದು ತಟ್ಟೆಗೆ ತುಪ್ಪ ಸವರಿ ಮಿಶ್ರಣ ಹಾಕಿ ಸಮತಟ್ಟಾಗಿ ತಟ್ಟಬೇಕು. ಬೇಕಿದ್ದಲ್ಲಿ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಬಹುದು. ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಯಾದ ಬರ್ಫಿ ರೆಡಿ.