ಬೃಹತ್ ರಕ್ತದಾನ, ಮಧುಮೇಹ, ನೇತ್ರ, ಸಾಮಾನ್ಯ ಆರೋಗ್ಯ ಕೀಲು, ಎಲುಬು ತಪಾಸಣಾ ಶಿಬಿರ
ಉಡುಪಿ: ಸಿಎಸ್‌ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಸರ್ಕಾರಿ ರಕ್ತ ನಿಧಿ ಘಟಕ, ಅಜ್ಜರಕಾಡು, ಉಡುಪಿ, ಗಿರಿಜ ಹೆಲ್ತ್ ಕೇರ್ & ಸರ್ಜಿಕಲ್ಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮೇ.11ರ ಭಾನುವಾರದಂದು ಬೃಹತ್ ರಕ್ತದಾನ, ಮಧುಮೇಹ, ನೇತ್ರ, ಸಾಮಾನ್ಯ ಆರೋಗ್ಯ ಕೀಲು ಮತ್ತು ಎಲುಬು ತಪಾಸಣಾ ಶಿಬಿರ ನಡೆಯಲಿದೆ.
ಉಡುಪಿ ಮಿಷನ್ ಆಸ್ಪತ್ರೆ ಬಳಿ ಮಲ್ಟಿ ಪರ್ಪಸ್ ಹಾಲ್ ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೃಹತ್ ರಕ್ತದಾನ, ಮಧುಮೇಹ, ನೇತ್ರ, ಸಾಮಾನ್ಯ ಆರೋಗ್ಯ ಕೀಲು ಮತ್ತು ಎಲುಬು ತಪಾಸಣಾ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ಬ್ಲಡ್ ಸೆಂಟರ್ ನ ಡಾ. ವೀಣಾ ಕುಮಾರಿ ಎಂ ಹಾಗೂ ಮಿಷನ್ ಆಸ್ಪತ್ರೆಯ ತಜ್ಞ ವೈದ್ಯರುಗಳಾದ, ಡಾ. ಅಭಿನವ ಅಶೋಕ್(ನೇತ್ರ ತಜ್ಞರು), ಡಾ. ಅರ್ಜುನ್ ಬಲ್ಲಾಳ್ (ಕೀಲು ಮತ್ತು ಎಲುಬು ತಜ್ಞರು), ಡಾ. ಸುಮನ ಆರ್ ಶೆಟ್ಟಿ (ಆರೋಗ್ಯ ತಜ್ಞರು) ಪಾಲ್ಗೊಳ್ಳಲಿದ್ದಾರೆ. ತಜ್ಞ ವೈದ್ಯರುಗಳಿಂದ ಸಂಬಂಧಪಟ್ಟ ರೋಗದ ಬಗ್ಗೆ ಚಿಕಿತ್ಸೆ ಹಾಗೂ ಸಮಗ್ರ ಆರೋಗ್ಯ ಮಾಹಿತಿಯನ್ನು ನೀಡಲಾಗುವುದು.
ಉಡುಪಿ ವಲಯದ ಕಥೋಲಿಕ್ ಸಭಾ (ರಿ), ಐಸಿವೈಎಮ್(ರಿ), ಭಾರತೀಯ ಕ್ರೈಸ್ತ ಒಕ್ಕೂಟ(ರಿ), ಉಡುಪಿ ರನ್ನರ್ಸ್ ಕ್ಲಬ್ (ರಿ), ಜಮೈತುಲ್ ಅಲ್‌ಫಲಾಹ್ (ರಿ) ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯುವ ಈ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.





