ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದವರಿಗೆ ಸರಕಾರದಿಂದ ಎಚ್ಚರಿಕೆ
ಹೊಸದಿಲ್ಲಿ(ಉಡುಪಿ ಟೈಮ್ಸ್ ವರದಿ): ಕೋವಿಡ್ ಲಸಿಕೆ ಪಡೆದ ಸಂತೋಷದ ಭರದಲ್ಲಿ ಹಲವರು ತಮ್ಮ ಕೋವಿಡ್-19 ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಆದರೆ ಈ ರೀತಿ ಆನ್‌ಲೈನ್‌ನಲ್ಲಿ ಶೇರ್ ಮಾಡುವುದರ ವಿರುದ್ಧ ಭಾರತ ಸರಕಾರ ಎಚ್ಚರಿಕೆ ನೀಡಿದೆ.
ಈ ಕುರಿತು ಗೃಹ ವ್ಯವಹಾರಗಳ ಸಚಿವಾಲಯ ತನ್ನ ಸೈಬರ್ ಸುರಕ್ಷತೆ ಜಾಗೃತಿ ಹ್ಯಾಂಡಲ್ ‘ಸೈಬರ್ ದೋಸ್ತ್’ ನಲ್ಲಿ ಒಂದು ಸುತ್ತೋಲೆ ಹೊರಡಿಸಿದೆ. “ಲಸಿಕೆ ಪ್ರಮಾಣಪತ್ರವು ನಿಮ್ಮ ಹೆಸರು ಮತ್ತು ವೈಯಕ್ತಿಕ ಮಾಹಿತಿಗಳನ್ನೊಳ ಗೊಂಡಿರುವುದರಿಂದ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದಿರಿ,” ಎಂದು ಪೋಸ್ಟ್ ನಲ್ಲಿ ಎಚ್ಚರಿಕೆ ನೀಡಲಾಗಿದೆಯಲ್ಲದೆ ಅವುಗಳನ್ನು ಸೈಬರ್ ಅಪರಾಧಿಗಳು ದುರ್ಬಳಕೆ ಮಾಡಿ ವಂಚಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.