ಯಶೋದಾ ಆಟೋ ಯೂನಿಯನ್: ಉಡುಪಿಯಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಆಟೋ ಸೇವೆ
ಉಡುಪಿ ಮೇ.4 ( ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಜನತಾ ಕರ್ಫ್ಯೂ ಅನ್ನು ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಕರ್ಫ್ಯೂ ನಿಯಮ ಪಾಲನೆ ಆಗುತ್ತಿದ್ದು ತುರ್ತು ವಾಹನಗಳನ್ನು ಹೊರತು ಪಡಿಸಿ ಇತರ ವಾಹನಗಳಿಗೆ ಬೆಳಿಗ್ಗೆ10 ಗಂಟೆ ಬಳಿಕ ನಿರ್ಬಂಧಿಸಲಾಗಿದೆ. ಆದ್ದರಿಂದ ತುರ್ತು ಪರಿಸ್ಥಿತಿ ಯಲ್ಲಿ ಸಾರ್ವಜನಿಕ ರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆಟೋ ಸೇವೆ ಯನ್ನು ಉಡುಪಿ ನಗರದಲ್ಲಿ ಆರಂಭಿಸಲಾಗಿದೆ.
ವೈದ್ಯಕೀಯ ಮತ್ತು ಇತರ ತುರ್ತು ಸೇವೆಗೆ ಉಡುಪಿ ನಗರಸಭೆ ಮತ್ತು ಗ್ರಾಮಾಂತರ ವ್ಯಾಪ್ತಿಯ ಜನರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ, ಯಶೋದಾ ಆಟೋ ಯೂನಿಯನ್ ವತಿಯಿಂದ ವೈದ್ಯಕೀಯ ಮತ್ತು ಇತರ ತುರ್ತು ಸೇವೆಗೆ 36 ಆಟೊ ರಿಕ್ಷಾಗಳನ್ನು ಸಿದ್ಧಪಡಿಸಲಾಗಿದೆ.ಈ ಆಟೋ ಸೇವೆ ಯು ಇಂದಿನಿಂದ ನಗರ ಸಭಾ ವ್ಯಾಪ್ತಿ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲಿದೆ. ಮಾಜಿ ನಗರಸಭಾ ಅಧ್ಯಕ್ಷ ಯುವರಾಜ್ ಪುತ್ತೂರು, ಹರೀಶ್, ಪ್ರವೀಣ್, ಕೃಷ್ಣ ಪೆರಂಪಳ್ಳಿ ಉಪಸ್ಥಿತರಿದ್ದರು.