ಉಡುಪಿ: ಕೈಗಾರಿಕಾ ಸಿಲಿಂಡರ್’ಗಳನ್ನು ಕೂಡಲೇ ಹಿಂದಿರುಗಿಸಿ-ಜಿಲ್ಲಾಧಿಕಾರಿ ಸೂಚನೆ

ಉಡುಪಿ: (ಉಡುಪಿ ಟೈಮ್ಸ್ ವರದಿ)ಕೋವಿಡ್-19 ಮಾರಕ ಸಾಂಕ್ರಾಮಿಕ ರೋಗವನ್ನು ತಡೆದು ಜನರ ಜೀವವನ್ನು ರಕ್ಷಿಸಬೇಕಾದ್ದು ಪ್ರಥಮ ಆದ್ಯತೆಯಾಗಿದ್ದು ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳ ಅವಶ್ಯಕತೆ ತುಂಬಾ ಇರುತ್ತದೆ.ಪ್ರಸ್ತುತ ಮೆಡಿಕಲ್ ಸಪ್ಲೈಗೆ ಆಕ್ಸಿನೇಟಡ್ ಸಿಲಿಂಡರಗಳ ಕೊರತೆ ತುಂಬಾ ಇರುತ್ತದೆ.

ಕೈಗಾರಿಕಾ ಸಿಲಿಂಡರ್ ಗಳನ್ನು ವೈದ್ಯಕೀಯ ಸಿಲಿಂಡರ್ ಗಳನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರವು ಈಗಾಗಲೇ ಅನುಮತಿ ನೀಡಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಕೈಗಾರಿಕಾ ಸಿಲಿಂಡರ್ ಗಳನ್ನು ಪಡೆದುಕೊಂಡು  ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಸಂಬಂಧಿಸಿದ ಎಲ್ಲಾ ಕಾರ್ಖಾನೆಗಳ ಮಾಲಿಕರು ಈ ಕೂಡಲೇ ತಮ್ಮ ಬಳಿ ಇಟ್ಟುಕೊಂಡಿರುವ ಕೈಗಾರಿಕಾ ಸಿಲಿಂಡರ್ ಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಿ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಗಳ ವ್ಯವಸ್ಥಿತ ಹಾಗೂ ಸುಗಮ ಪೂರೈಕೆಗೆ ಸಹಕಾರ ನೀಡಿ ಕೋವಿಡ್ ರೋಗಿಗಳ ಆರೈಕೆಗೆ ಸಹಾಯ ಹಸ್ತ ಚಾಚುವಂತೆ ಈ ಮೂಲಕ ಮನವಿ ಮಾಡಲಾಗಿದೆ.

(ಜಿ.ಜಗದೀಶ,ಭಾ.ಆ.ಸೇ) ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರುಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಉಡುಪಿ ಜಿಲ್ಲೆ, ಉಡುಪಿ.

Leave a Reply

Your email address will not be published. Required fields are marked *

error: Content is protected !!