ಉಡುಪಿ: ಅಭಿವೃದ್ಧಿಗೆ ಪೂರಕರಾಗಿರುವ ಸಂಸದರನ್ನು ಗೆಲ್ಲಿಸಿ- ಕಿರಣ್ ಕುಮಾರ್

Oplus_0

ಉಡುಪಿ ಏ.23(ಉಡುಪಿ ಟೈಮ್ಸ್ ವರದಿ): ಕರಾವಳಿಯ ಸಮಸ್ಯೆಗಳನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತರುವ ಅಭಿವೃದ್ಧಿಗೆ ಪೂಕವಾಗುವ ಸಂಸದರು ಇಲ್ಲಿಗೆ ಬೇಕಾಗಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಅವರು ಹೇಳಿದ್ದಾರೆ.

ಉಡುಪಿ ಜಿಲ್ಲೆ ಅಭಿವೃದ್ಧಿ ಕೆಲಸದಲ್ಲಿ 10 ವರ್ಷ ಹಿಂದೆ ಬಿದ್ದಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಮುಂದೆಯಿರುವ ಉಡುಪಿಯಲ್ಲಿ ಒಂದೇ ಒಂದು ಐಟಿ ಅಥವಾ ಯಾವುದೇ ಕಂಪೆನಿಯಲ್ಲ. ಇಲ್ಲಿನ ಯುವಕರು ಉದ್ಯೋಗ ಅರಸಿ ಇತರ ಕಡೆಗೆ ಹೋಗುತ್ತಿದ್ದಾರೆ. ಅದು ನಿಲ್ಲಬೇಕು. ಇಲ್ಲಿಯೇ ಇಲ್ಲಿನ ಯುವಕ ಯುವತಿಯರಿಗೆ ಉದ್ಯೋಗವಕಾಶ ಸಿಗುವಂತಾಗಬೇಕು ಎಂದರು.

ಕರಾವಳಿಯ ಮೀನುಗಾರರ ನಿರ್ಲಕ್ಷ್ಯ ಮಾಡಲಾಗುತ್ತಿದೆ. 5 ವರ್ಷದ ಹಿಂದೆ ಮುಳುಗಡೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‍ನ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಇದಕ್ಕೆ ಕಾರಣ ಇಲ್ಲಿನ ಯಾವುದೇ ಮಂತ್ರಿ ಈ ಬಗ್ಗೆ ಸರಿಯಾದ ಮಾಹಿತಿ ಪ್ರಧಾನಿಗಳ ಗಮನಕ್ಕೆ ತಂದಿಲ್ಲ. ಇಲ್ಲಿನ ಯಾವುದೇ ಮಂತ್ರಿಗಳು ತಮ್ಮ ಹೆಸರಿನಿಂದ ತಮ್ಮ ಅಭಿವೃದ್ಧಿ ಕಾರ್ಯದಿಂದ ಗೆಲ್ಲದೇ ಬರೀ ಪ್ರಧಾನ ಮಂತ್ರಿಗಳ ಹೆಸರಲ್ಲಿ ಗೆದ್ದಿದ್ದಾರೆ. ಹಾಗಾಗಿ ಇಲ್ಲಿನ ಯಾವುದೇ ಸಮಸ್ಯೆಗಳು ಪ್ರಧಾನ ಮಂತ್ರಿಗಳವರೆಗೆ ಹೋಗುವುದಿಲ್ಲ. ಮುಂದೆ ಬರುವ ಸಂಸದರು ಕೂಡಾ ಪ್ರಧಾನಿಗಳ ಹೆಸರಲ್ಲಿ ಗೆದ್ದರೆ ಕರಾವಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗೂ ಮುಂದೆ ಓರ್ವ ಉತ್ತಮ ನಾಯಕನನ್ನು ನಾವು ಗೆಲ್ಲಿಸಿದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಪ್ರಧಾನಿಗಳ ಬಳಿ ಮಾತನಾಡಲು ಸಾಧ್ಯವಾಗುತ್ತದೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಓರ್ವ ಉತ್ತಮ ನಾಯಕ ಅವರು ರಾಜ್ಯದ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿದ್ದಾರೆ. ಮತ್ತೊಂದೆಡೆ ಜಯಪ್ರಕಾಶ್ ಹೆಗ್ಡೆ ಅವರು ಕೂಡಾ ಓರ್ವ ಅಭಿವೃದ್ಧಿಗೆ ಪೂರಕವಾಗಿರುವ ಅಭ್ಯರ್ಥಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಯಾವುದೇ ರಾಜಕೀಯ ಪಕ್ಷದ ಪ್ರಚಾರ ಕಾರ್ಯದಲ್ಲಿ ಬಿಲ್ಲವರದ್ದು ಹಾಗೂ ಮೊಗವೀರರದ್ದು ಒಂದೊಂದು ಗುಂಪು ಕಾಣಬಹುದು. ಇದರಲ್ಲಿ ಇತರರು ಯಾರೂ ಕೂಡಾ ಕಾಣುವುದಿಲ್ಲ. ಎಲ್ಲಾ ಕಾರ್ಯದಲ್ಲೂ ತಲೆ ಕೊಡುವವರು ಬಿಲ್ಲವರು ಮತ್ತು ಮೊಗವೀರರು ಮತ್ತು ಹತ್ಯೆ ಆಗುವುದು ಕೂಡಾ ಅವರದ್ದೆ ಹೆಚ್ಚು. ಬೇರೆಯವರು ಒಳ್ಳೆಯ ಕೆಲಸದಲ್ಲಿ ಇರುತ್ತಾರೆ ಇಲ್ಲಿನ ಬಿಲ್ಲವ ಮೊಗವೀರರಿಗೆ ಇದು ಅರ್ಥವಾಗುತ್ತಿಲ್ಲ. ತಮ್ಮ ಮುಂದಿನ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ, ಉದ್ಯೋಗ ಸಿಗುವಂತಾಗಬೇಕು ಈ ಬಗ್ಗೆ ನಾವು ಯೋಚಿಸಿ ಮುಂದಿನ ಸಂಸದರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.

ಮೋಗವೀರರಿಗೆ ಬಿಲ್ಲವ ಮತ್ತು ಬಂಟರು ಎರಡು ಕಣ್ಣುಗಳಿದ್ದಂತೆ ಆದ್ದರಿಂದ ಇಬ್ಬರನ್ನು ರಾಜಕೀಯದ ಮುಂಚೂಣಿಯಲ್ಲಿರಿಸಬೇಕಾದರೇ ನಾವು ಯೋಚಿಸಿ ಮತ ಹಾಕಬೇಕಾಗಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!