ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಬರುವುದನ್ನ ತಡೆಯಲು ಲಸಿಕೆ ಒಂದೇ ಉಪಾಯ: ಡಾ.ಸುಧಾಕರ್
ಬೆಂಗಳೂರು ಎ.27 ( ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಬರುವುದನ್ನ ತಡೆಯಲು ದೊಡ್ಡ ಮಟ್ಟದ ಸಿದ್ಧತೆ ಆಗಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಕೊರೋನಾ ಮೂರನೇ ಅಲೆಯನ್ನ ತಡೆಯಲು ದೊಡ್ಡ ಮಟ್ಟದ ಸಿದ್ಧತೆ ಆಗಬೇಕು. ಹಾಗಾಗಿ ಲಸಿಕೆ ಒಂದೇ ನಮಗೆ ಕೋವಿಡ್ನಿಂದ ತಪ್ಪಿಸಿಕೊಳ್ಳಲು ಇರುವ ಉಪಾಯ. ಲಸಿಕೆ ಪಡೆಯುದರಿಂದ ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಿರಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತು ಮುಂದುವರೆಸಿದ ಅವರು, 18 ವರ್ಷ ಮೆಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ. ಇಲ್ಲಿವರೆಗೂ ಲಸಿಕೆ ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರಕಾರ ಸಮಾನವಾಗಿ ಜನಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ. ರಾಜ್ಯ ಸರಕಾರ ಅದನ್ನು ಸರಿಯಾದ ರೀತಿ ನೀಡುತ್ತಿದೆ. ಲಸಿಕೆ ಸಿಗಲ್ಲ ಅಂತ ಕೆಲವರು ಸುಳ್ಳು ಹೇಳಿದ್ದಾರೆ. ಲಸಿಕೆ ಪಡೆಯುವುದು ಅಗತ್ಯ ಸೇವೆಗೆ ಒಳಪಡಲಿದೆ. ಹಾಗಾಗಿ ಲಸಿಕೆ ಕೊಡೋದನ್ನ ಮುಂದುವರೆಸುತ್ತೇವೆ. ರಿಜಿಸ್ಟರ್ ಮಾಡಿಕೊಂಡು ಲಸಿಕೆ ನೀಡುತ್ತೇವೆ ಎಂದರು.