ಬ್ರಹ್ಮಾವರ: ಸ್ಕೂಟರ್ ಡಿಕ್ಕಿ- ಸೈಕಲ್ ಸವಾರ ಮೃತ್ಯು
ಬ್ರಹ್ಮಾವರ ಮಾ.16 (ಉಡುಪಿ ಟೈಮ್ಸ್ ವರದಿ): ಸ್ಕೂಟರ್ ಡಿಕ್ಕಿ ಹೊಡೆದು ಸೈಕಲ್ ಸವಾರ ಮೃತಪಟ್ಟ ಘಟನೆ ಸ್ರಾಬರಕಟ್ಟೆ- ಬ್ರಹ್ಮಾವರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಶೀನ ಮರಕಾಲ (76) ಮೃತಪಟ್ಟವರು. ಇವರು ಇಂದು ಬೆಳಿಗ್ಗೆ ಬ್ರಹ್ಮಾವರದ ಹೇರಾಡಿ ಗ್ರಾಮದ ಕವಲೇಶ್ವರ ಬಾರ್ಕೂರು ಎಂಬಲ್ಲಿ ಸ್ರಾಬರಕಟ್ಟೆ- ಬ್ರಹ್ಮಾವರ ಮುಖ್ಯ ರಸ್ತೆಯಲ್ಲಿ ಹೇರಾಡಿ ಕಡೆಯಿಂದ ಬಾರ್ಕೂರು ಕಡೆಗೆ ಸೈಕಲ್ನಲ್ಲಿ ಹೋಗುತ್ತಿದ್ದು. ಈ ವೇಳೆ ಹಿಂದಿನಿಂದ ಬಂದ ಸ್ಕೂಟರ್ ಸವಾರ ರಾಮಚಂದ್ರ ಸೋಮಯಾಜಿಯು ತನ್ನ ಸ್ಕೂಟರ್ ರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಶೀನ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸೈಕಲ್ ಸವಾರ ಶೀನ ಮರಕಾಲರವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.