ಕೋಟ: ಲೋನ್ ನೀಡುವ ನೆಪದಲ್ಲಿ ಮಹಿಳೆಗೆ 2.46 ಲ.ರೂ. ವಂಚನೆ

ಕೋಟ ಮಾ.16(ಉಡುಪಿ ಟೈಮ್ಸ್ ವರದಿ): ಆನ್ಲೈನ್‌ನಲ್ಲಿ ಸಾಲ ಮಂಜೂರಾಗಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಗೆ 2.46 ಲಕ್ಷ ರೂ. ವಂಚಿಸಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬ್ರಹ್ಮಾವರದ ಕೋಟ ತಟ್ಟು ಗ್ರಾಮದ ಅಶ್ವಿತಾ ಎಂಬವರು ಫೆ.20 ರಂದು Facebook Application ನಲ್ಲಿ BAJAJ FINERV Loan ಬಗ್ಗೆ ಕಂಡ  ಜಾಹೀರಾತು ಲಿಂಕ್‌ ಅನ್ನು ತೆರೆದು, ಅದರಲ್ಲಿ ಸೂಚನೆಯಂತೆ ಅವರ E-mail ID ಹಾಗೂ ಮೊಬೈಲ್‌ ನಂಬ್ರವನ್ನು ನಮೂದಿಸಿದ್ದರು. ಬಳಿಕ ಅದೇ ದಿನ ಬೆಳಿಗ್ಗೆ ಅವರಿಗೆ ಓರ್ವ ವ್ಯಕ್ತಿ ಕರೆ ಮಾಡಿ, 5 ಲಕ್ಷ ಸಾಲ ಮಂಜೂರಾಗಿದೆ ಅದಕ್ಕೆ ಬ್ಯಾಂಕ್‌ ಡಿಟೈಲ್ಸ್‌, ವೈಯಕ್ತಿಕ ಗುರುತು ಚೀಟಿ ಹಾಗೂ ಫೋಟೋವನ್ನು ವಾಟ್ಸ್ ಆ್ಯಪ್ ಮುಖಾಂತರ ಪಡೆದುಕೊಂಡಿದ್ದಾನೆ ಅಲ್ಲದೆ ಬಳಿಕ BAJAJ FINSERV EMI FINANCE ಎಂಬ ಲೆಟರ್‌ ಹೆಡ್‌ ನಲ್ಲಿ Approval For The Loan Amount 5,00,000/- ಎಂಬುದಾಗಿ ಸೀಲು ಮತ್ತು ಸಹಿ ಹಾಕಿರುವ ಲೋನ್ ಮಂಜೂರಾಗಿರುವ ವರದಿ ಕಳುಹಿಸಿದ್ದನು. ಆ ಬಳಿಕ  ಪದೇ ಪದೇ ಕರೆ ಮಾಡಿ ಬೇರೆ ಬೇರೆ ಕಾರಣಗಳನ್ನು ಹೇಳಿ ನಂಬಿಸಿ ಹಂತ ಹಂತವಾಗಿ ಒಟ್ಟು ರೂ. 2,46,861/- ಮೊತ್ತವನ್ನು ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ  ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!