ಪಿಟ್‌ಬುಲ್ ಟೆರಿಯರ್, ರಾಟ್‌ ವಿಲಿಯರ್ ಸೇರಿ 23 ತಳಿಯ ನಾಯಿಗಳ ಸಾಕಣೆ, ಮಾರಾಟ ನಿಷೇಧಿಸಿದ ಕೇಂದ್ರ

ಹೊಸದಿಲ್ಲಿ : ಮಾನವರ ಜೀವಕ್ಕೆ ಅಪಾಯಕಾರಿ ಎನಿಸಿರುವ 23 ತಳಿಯ ನಾಯಿಗಳ ಮಾರಾಟ ಮತ್ತು ಸಾಕಣೆಯನ್ನು ನಿಷೇಧಿಸುವಂತೆ ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.

ಅದರಂತೆ ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್ ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್ ಮತ್ತು ಕಕೇಶಿಯನ್ ಶೆಫರ್ಡ್ ಡಾಗ್, ಸೌತ್ ರಷ್ಯನ್ ಶೆಫರ್ಡ್ ಡಾಗ್, ಟೋರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮ್ಯಾಸ್ಟಿಫ್ಸ್, ಟೆರಿಯರ್ಸ್, ರೋಡೇಸಿಯನ್ ರಿಡ್ಜ್‌ಬ್ಯಾಕ್, ವುಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ ಮತ್ತು ಬ್ಯಾಂಡೋಗ್ ತಳಿಯ ನಾಯಿಗಳ ಮಾರಾಟ ಮತ್ತು ಸಾಕಣೆಯನ್ನು ನಿಷೇಧ ಮಾಡುವಂತೆ ಸೂಚನೆ ನೀಡಲಾಗಿದೆ.

ಹಾಗೂ ಈಗಾಗಲೇ ಸಾಕು ಪ್ರಾಣಿಗಳಾಗಿ ಸಾಕಿರುವ ಈ ತಳಿಯ ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ ಮುಂದೆ ಸಂತಾನಾಭಿವೃದ್ಧಿ ಆಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ.

ಕೆಲವು ತಳಿಯ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಮತ್ತು ಇತರ ಉದ್ದೇಶಗಳಿಗಾಗಿ ಸಾಕುವುದನ್ನು ನಿಷೇಧಿಸುವಂತೆ ನಾಗರಿಕರು, ನಾಗರಿಕ ವೇದಿಕೆಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳಿಂದ ಮನವಿಗಳನ್ನು ಸ್ವೀಕರಿಸಲಾಗಿದೆ ಎಂದು ಈ ಬಗ್ಗೆ ಪರಿಶೀಲಿಸಲು ರಚಿಸಿದ್ದ ಸಮಿತಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!