ಕಾಪು: ಅಕ್ರಮ ಮರಳು ಸಾಗಾಟದ ವಾಹನ ವಶ
ಕಾಪು ಮಾ.12 (ಉಡುಪಿ ಟೈಮ್ಸ್ ವರದಿ): ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಪೊಲೀಸರು ವಾಹನ ಸಮೇತ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಕಾಪು ಠಾಣಾ ಪೊಲೀಸರು ಇಂದು ಬೆಳಿಗ್ಗೆ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ವಾಹನವೊಂದರಲ್ಲಿ ನೀರು ಇಳಿಯುತ್ತಿರುವುದು ಕಂಡುಬಂದಿದ್ದು, ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಅನುಮಾನಗೊಂಡು ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ವಾಹನವನ್ನು ರಸ್ತೆ ಬದಿ ನಿಲ್ಲಿಸಿರುತ್ತಾನೆ. ಈ ವೇಳೆ ವಾಹನ ಪರಿಶೀಲಿಸಿದಾಗ ವಾಹನದಲ್ಲಿ ಬಾಡಿಯ ಮಟ್ಟದವರೆಗೆ ಸುಮಾರು 3 ಯೂನಿಟ್ ನಷ್ಟು ಮರಳನ್ನು ತುಂಬಿಸಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದ ಚಾಲಕನ ಪ್ರದೀಪ್ ಎಂಬಾತನ ವಿಚಾರಿಸಿದಾಗ ವಾಹನವು ಶಿರ್ವಾ ನಿವಾಸಿ ಲತೀಫ್ ಎಂಬುವವವರಿಗೆ ಸೇರಿದ್ದಾಗಿದ್ದು, ಲತೀಫ್ ರವರು ಇತ್ತೀಚಿಗೆ ಸುಮಾರು 1 ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಏರ್ ಪೋರ್ಟ್ ನಿಂದ ಸುಮಾರು 3-4 ಕಿ.ಮೀ ದೂರದಲ್ಲಿರುವ ಹೊಳೆಯೊಂದರಿಂದ ಮರಳನ್ನು ತೆಗೆಸಿ ಅದನ್ನು ಮಾರಾಟ ಮಾಡಿ ಲಾಭ ಮಾಡುವ ಉದ್ದೇಶದಿಂದ ಉಡುಪಿ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದು, ಅದರಂತೆ ಈ ದಿನ ಹೊಳೆಯಿಂದ ಮರಳನ್ನು ತೆಗೆದುಕೊಂಡು ಮಾರಾಟ ಮಾಡುವ ಸಲುವಾಗಿ ಉಡುಪಿ ಕಡೆಗೆ ಹೋಗುತ್ತಿರುವುದಾಗಿದೆ ತಿಳಿಸಿರುತ್ತಾನೆ.
ಈ ವೇಳೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನವನ್ನು ಹಾಗೂ ಅದರಲ್ಲಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.