ಅನಂತಕುಮಾರ್ ಹೆಗಡೆಯನ್ನು UAPA ಕಾಯ್ದೆಯಡಿ ಜೈಲಿಗಟ್ಟಿ : ಶ್ಯಾಮರಾಜ್ ಬಿರ್ತಿ

ಉಡುಪಿ ಮಾ.12(ಉಡುಪಿ ಟೈಮ್ಸ್ ವರದಿ): ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನು ಹೇಳಿಕೆಯನ್ನು ಪದೇ ಪದೇ ಬಹಿರಂಗ ವಾಗಿ ಹೇಳಿತ್ತಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರನ್ನು UAPA ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸದ ಅನಂತಕುಮಾರ್ ಹೆಗಡೆ ಅವರು ಆಗಾಗ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದು ಮೊದಲೊಮ್ಮೆ ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುದಕ್ಕೆ ಅಂತ ಹೇಳಿಕೆ ನೀಡಿದ್ದರು. ಈಗ ಮತ್ತೆ ನಮಗೆ 400 ಸಂಸದರನ್ನು ಕೊಡಿ ನಾವು ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿಕೆ ನೀಡಿರುತ್ತಾರೆ. ಸಂವಿಧಾನದಡಿ ಗೆದ್ದು ಪ್ರಮಾಣ ವಚನ ಸ್ವೀಕರಸಿ ಈಗ ಸಂವಿಧಾನವನ್ನೇ ಬದಲಾಯಿಸುತ್ತೇವೆ , ತಿದ್ದುಪಡಿ ಮಾಡುತ್ತೇವೆ ಎಂದು ಪದೇ ಪದೇ ಬಹಿರಂಗ ಹೇಳಿ ನೀಡಿರುವುದು ದೇಶದ ಅಖಂಡತೆಗೆ ಭಂಗ ತರುವ ಮತ್ತು ಪ್ರಜಾಪ್ರಭುತ್ವ ವಿರೋಧಿ  ದೇಶಧ್ರೋಹದ ಕ್ರತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಪತ್ರಿಕಾ ರಂಗವನ್ನು ನಾಯಿಗಳಿಗೆ ಹೋಲಿಸಿರುವುದು ಖಂಡನೀಯ. ಬಾಬಾ ಸಾಹೇಬರು ರಚಿಸಿದ ಸಂವಿಧಾನ ಬಗ್ಗೆ ಕೇವಲವಾಗಿ ಮಾತನಾಡಿದರೆ ಈ ದೇಶದ ಮೂಲನಿವಾಸಿಗಳಾದ ನಾವು ಸರಿಯಾದ ಮತ್ತು ಮುಟ್ಟಿನೋಡಿಕೊಳ್ಳುವಂತಹ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಹೆಗಡೆಯವರೇ ಈ ದೇಶವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾಧಿಸಿಕೊಂಡು ಬಂದ ದೇಶ , ಬಹುತ್ವವನ್ನು ಕಾಪಾಡಿಕೊಂಡು ಬಂದ ದೇಶ. ನಾಲಗೆ ಚಪಲಕ್ಕೆ ಬಾಯಿಗೆ ಬಂದಹಾಗೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ ತಕ್ಕ ಉತ್ತರ ಕೊಡಬೇಕಾದಿತು  ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!