ಉಡುಪಿ: ನಗರಸಭೆಯ ರಸ್ತೆ ಸ್ವಚ್ಛಗೊಳಿಸುವ ಯಂತ್ರ ಉದ್ಘಾಟನೆ

ಉಡುಪಿ ಮಾ.12(ಉಡುಪಿ ಟೈಮ್ಸ್ ವರದಿ) :15 ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 74.51 ಲ. ರೂ. ಅನುದಾನದಲ್ಲಿ ನೂತನವಾಗಿ ಖರೀದಿಸಲಾದ ನಗರ ಸಭಾ ರಸ್ತೆ ಸ್ವಚ್ಛಗೊಳಿಸುವ ವಾಹನವನ್ನು ಇಂದು ಉಡುಪಿ ನಗರಸಭಾ ಆವರಣದಲ್ಲಿ ಉದ್ಘಾಟನೆಗೊಳಿಸಲಾಯಿತು.


ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಅವರು ನೂತನ ಯಂತ್ರವನ್ನು ಉದ್ಘಾಟಿಸಿದರು. ಹಾಗೂ ಸ್ವತಃ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ವಾಹನವನ್ನು ಚಲಾಯಿಸುವ ಮೂಲಕ ಯಂತ್ರದ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.


ಇದೇ ವೇಳೆ ನೂತನ ರಸ್ತೆ ಸ್ವಚ್ಛಗೊಳಿಸುವ ಯಂತ್ರದ ಕಾರ್ಯವೈಖರಿಯ ಪ್ರಾತ್ಯಕ್ಷಿಯನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಪೌರಾಯುಕ್ತರಾದ ರಾಯಪ್ಪ, ಸ್ಥಾಯಿ ಸಮೀತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ನಿಟ್ಟೂರು ವಾರ್ಡ್‍ನ ಕೌನ್ಸಿಲರ್ ಸಂತೋಷ್ ಜತ್ತನ್ನ, ಗುಂಡಿಬೈಲು ವಾರ್ಡ್‍ನ ಕೌನ್ಸಿಲರ್ ಪ್ರಭಾಕರ ಪೂಜಾರಿ, ಕಕ್ಕುಂಜೆ ವಾರ್ಡ್‍ನ ಕೌನ್ಸಿಲರ್ ಬಾಲ ಕೃಷ್ಣ ಶೆಟ್ಟಿ, ಇಂದಿರಾನಗರ ವಾರ್ಡ್‍ನ ಕೌನ್ಸಿಲರ್ ಚಂದ್ರ ಶೇಖರ, ಕಿನ್ನಿಮುಲ್ಕಿ ವಾರ್ಡ್‍ನ ಕೌನ್ಸಿಲರ್ ಅಮೃತಾ ಕೃಷ್ಣ ಮೂರ್ತಿ, ಒಳಕಾಡು ವಾರ್ಡ್‍ನ ಕೌನ್ಸಿಲರ್ ರಜನಿ ಹೆಬ್ಬಾರ್, ಸುಬ್ರಹ್ಮಣ್ಯ ನಗರ ವಾರ್ಡ್‍ನ ಕೌನ್ಸಿಲರ್ ಜಯಂತಿ, ಅಜ್ಜರಕಾಡು ವಾರ್ಡ್‍ನ ಕೌನ್ಸಿಲರ್ ರಶ್ಮಿ, ಮಲ್ಪೆ ಸೆಂಟ್ರಲ್ ವಾರ್ಡ್‍ನ ಕೌನ್ಸಿಲರ್ ಎಡ್ಲಿನ್ ಕರ್ಕಡ, ನಗರ ಸಭೆ ಕಂದಾಯ ಅಧಿಕಾರಿ ಸಂತೋಷ್ ಎಸ್.ಡಿ, ನಗರ ಸಭೆಯ ಆರೋಗ್ಯ ನಿರೀಕ್ಷರಾದ ಮನೋಹರ್, ಸುರೇಂದ್ರ ಹೋಬಳಿದಾರ್ ಹಾಗೂ ನಗರ ಸಭೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ವಾಹನದ ವಿಶೇಷತೆ:
ಈ ವಾಹನ 6.0 ಕ್ಯೂಬಿಕ್ ಸಾಮಥ್ರ್ಯ ಹೊಂದಿದೆ
ಹೈ ಪ್ರೆಶರ್ ವ್ಯಾಕ್ಯೂಮ್ ಪೈಪ್ ನಿಂದ ರಸ್ತೆ ಬದಿ ಇರುವ ತ್ಯಾಜ್ಯ ವಸ್ತುಗಳನ್ನು ಸ್ವಚ್ಛ ಗೊಳಿಸುತ್ತದೆ
1 ಗಂಟೆಯಲ್ಲಿ ಗರಿಷ್ಠ 5 ರಿಂದ 6 ಕಿಮೀ ರಸ್ತೆಯನ್ನು ಉತ್ತಮ ರಿತಿಯಲ್ಲಿ ಸ್ವಚ್ಛ ಗೊಳಿಸುತ್ತದೆ
15 ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 74.51 ಲ. ರೂ. ಅನುದಾನದಲ್ಲಿ ಖರೀದಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!