ಉಡುಪಿ: 18.80 ಲ.ರೂ.ಮೌಲ್ಯದ ವಜ್ರಾಭರಣ-ನಗದು ಕಳವು
ಉಡುಪಿ ಮಾ.11(ಉಡುಪಿ ಟೈಮ್ಸ್ ವರದಿ): ಬಡಗುಬೆಟ್ಟು ಗ್ರಾಮದಲ್ಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು 18.80 ಲ.ರೂ.ಮೌಲ್ಯದ ವಜ್ರದ ಆಭರಣಗಳು ಹಾಗೂ ನಗದು ಕಳ್ಳತನ ನಡೆಸಿರುವ ಘಟನೆ ಇಂದು ನಡೆದಿದೆ.
ಸ್ಥಳೀಯ ನಿವಾಸಿ ಸುತಲ ಬಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಇವರು ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಬಂದು ಮನೆಯಲ್ಲಿ ಮಲಗಿದ್ದು, ಇಂದು ಬೆಳಿಗ್ಗೆ ನೋಡುವಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.ನಿನ್ನೆ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯ ಒಳಗೆ ಟಿಪಾಯಿ ಮೇಲೆ ಇಟ್ಟಿದ್ದ 18 ಲ.ರೂಮೌಲ್ಯದ ವಜ್ರದ ಆಭರಣಗಳು ಮತ್ತು 80,000 ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.