ಕಾರ್ಕಳ: ಜಾನುವಾರು ಕಳ್ಳ ಸಾಗಾಟ- ದೂರು ದಾಖಲು

ಕಾರ್ಕಳ ಮಾ.7(ಉಡುಪಿ ಟೈಮ್ಸ್ ವರದಿ): ವಧೆ ಮಾಡುವ ಉದ್ದೇಶದಿಂದ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾ.6 ರಂದು ರಾತ್ರಿ ವಾಹನವೊಂದರಲ್ಲಿ ಜಾನುವಾರುವೊಂದನ್ನು ನೆಲ್ಲಿಕಾರು ಕಡೆಯಿಂದ ಹೊಸ್ಮಾರು ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಪಡೆದ ಕಾರ್ಕಳದ ನೂರಾಳ್ ಬೆಟ್ಟುವಿನ ಚೇತನ್ ಅವರು ಜಾನುವಾರು ಸಾಗಾಟದ ವಾಹನವನ್ನು ಹಿಂಬಾಲಿಸಿದ್ದರು. ಬಳಿಕ ದೂರದಲ್ಲಿ ನಿಂತು ನೋಡಿದಾಗ ಚಾಲಕನು ಪಿಕ್ ಅಪ್ ವಾಹನವನ್ನು ಕಾರ್ಕಳದ ಈದು ಗ್ರಾಮದ ಸರಸ್ವತಿ ನಗರದ MH ಮಂಜಿಲ್ ಎಂಬ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿ ಪಿಕ್ ಅಪ್ ವಾಹನದ ಚಾಲಕ ಮತ್ತು ಇನ್ನೋರ್ವನು ವಾಹನದಲ್ಲಿದ್ದ ಜಾನುವಾರನ್ನು ಕೆಳಗೆ ಇಳಿಸಿ ಮನೆಯ ಹಿಂಬದಿಗೆ ಸಾಗಿಸಿದ್ದರು. ನಂತರ ಚೇತನ್ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಸ್ಥಳಕ್ಕೆ ಪೊಲೀಸರು ಬಂದು ವಾಹನದ ಚಾಲಕ  ವಿಜಯ್ ಎಂಬಾತನನ್ನು ವಿಚಾರಿಸಿದಾಗ ಆತನು ಜಾನುವಾರನ್ನು ನೆಲ್ಲಿಕಾರಿನಿಂದ ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡಿದ್ದಾಗಿ ತಿಳಿಸಿದ್ದನು. ಈ ವೇಳೆ  ಜಾನುವಾರನ್ನು ಹುಡುಕಾಡಿದರು ಜಾನುವಾರು ಸಿಕ್ಕಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!