ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಸೇರಿ ಮೆಟಾ ಆ್ಯಪ್‌ಗಳು ಏಕಾಏಕಿ ಲಾಗೌಟ್ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು: ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾ ಸಂಸ್ಥೆಯ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಇದರಿಂದ ಬಳಕೆದಾರರ ಕಂಗಲಾಗಿದ್ದು, ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಹೌದು.. ಇಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಮೆಟಾ ಸಂಸ್ಥೆಯ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ಏಕಾಏಕಿ ಲಾಗೌಟ್ ಆಗಿದ್ದು, ಖಾತೆದಾರರು ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಪಾಸ್ ವರ್ಡ್ ಬದಲಾವಣೆ ಮತ್ತು ತಪ್ಪು ಪಾಸ್ವರ್ಡ್ ನ ಸಂದೇಶಗಳು ಕಾಣಿಸುತ್ತಿದ್ದು, ಇದು ಗ್ರಾಹಕರು ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಆತಂಕಗೊಂಡು ಪದೇ ಪದೇ ಪರಿಶೀಲಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!