ಉಡುಪಿ: ಐಸಿಎಐನ ನೂತನ ಅಧ್ಯಕ್ಷರಾಗಿ ಸಿಎ. ಕಿರಣ ಕುಮಾರ್ ಹೆಚ್ ಆಯ್ಕೆ
ಉಡುಪಿ ಫೆ.28(ಉಡುಪಿ ಟೈಮ್ಸ್ ವರದಿ): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ 2024-25ನೇ ಸಾಲಿನ ಅಧ್ಯಕ್ಷರಾಗಿ ಸಿಎ. ಕಿರಣ ಕುಮಾರ್ ಹೆಚ್ ಅವರನ್ನು ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ಕುಂಜಿಬೆಟ್ಟುವಿನ ಐಸಿಎಐ ಸಭಾಭವನದಲ್ಲಿ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ವೇಳೆ ಉಪಾಧ್ಯಕ್ಷರಾಗಿ ಸಿಎ. ಅರ್ಚನಾ ಆರ್ ಮಯ್ಯ, ಕಾರ್ಯದರ್ಶಿಯಾಗಿ ಸಿಎ. ರಾಘವೇಂದ್ರ ಮೊಗೇರಾಯ, ಕೋಶಾಧಿಕಾರಿಯಾಗಿ ಸಿಎ. ಅಶ್ವಥ್ ಜೆ ಶೆಟ್ಟಿ, ಸಿಕಾಸಾ ಅಧ್ಯಕ್ಷರಾಗಿ ಸಿಎ. ಕೆ ಲಕ್ಷ್ಮೀಶ ರಾವ್ ಮತ್ತು ಸಿಎ. ಲೋಕೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸಿಎ. ಕಿರಣ ಕುಮಾರ್ ಹೆಚ್ ಅವರು ತಮ್ಮ ಭಾಷಣದಲ್ಲಿ 2024-25 ನೇ ಸಾಲಿನ ತಮ್ಮ ಕ್ರಿಯಾ ಯೋಜನೆ ಕುರಿತು ಮಾತನಾಡಿದರು. ಸಿಎ. ಅರ್ಚನಾ ಆರ್ ಮಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಸಿಎ. ರಾಘವೇಂದ್ರ ಮೊಗೇರಾಯ ಅವರು ವಂದಿಸಿದರು.