ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರವನ್ನು ಕಡೆಗಣಿಸಿ ರಾಜಕಾರಣ ಮಾಡುವಲ್ಲಿ ಬ್ಯುಸಿ-ಸುರೇಶ್ ಶೆಟ್ಟಿ ಬನ್ನಂಜೆ ಆರೋಪ
ಉಡುಪಿ ಫೆ.27(ಉಡುಪಿ ಟೈಮ್ಸ್ ವರದಿ): ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಕೇಂದ್ರದ ಸಚಿವೆಯಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ರವರು ಸಂಪೂರ್ಣವಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಮತ್ತು ದೆಹಲಿಯಲ್ಲಿ ಉಳಿದುಕೊಂಡು ರಾಜಕಾರಣ ಮಾಡಿದ್ದಾರೆ ಹೊರತು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಯಾವುದೇ ಕೊಡುಗೆಯನ್ನು ನೀಡಲಿಲ್ಲ. ಇಂದ್ರಾಳಿಯ ರೈಲ್ವೆ ಬ್ರಿಡ್ಜ್ ಆಗಲಿ, ಕಲ್ಯಾಣಪುರ ಮೇಲ್ ಸೇತುವೆಯಾಗಲಿ ಇವೆರಡರ ಕಾಮಗಾರಿಗಳು ಇನ್ನೂ ಕುಂಟುತ್ತಾ ಸಾಗುತ್ತಿವೆ. ಇತ್ತ ಪರ್ಕಳದ ರಸ್ತೆಗೆ ಗತಿಯೇ ಇಲ್ಲದಂತಾಗಿದೆ. ಇದರ ಜೊತೆಗೆ ಕಲ್ಮಾಡಿ ಮಲ್ಪೆಯಲ್ಲಿ ಜಾಗ ಬಿಡುವವರಿಗೆ ಪರಿಹಾರವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕ್ಷೇತ್ರದಲ್ಲಿ ಯಾರಾದರೂ ಹಿಂದೂ ಯುವಕರ ಕೊಲೆಯಾದರೆ ಇಲ್ಲಿ ಬಂದು ಅಬ್ಬಿರಿದು ಬೊಬ್ಬೆ ಯನ್ನು ಹೊಡೆಯುತ್ತಾರೆ. ಕ್ಷೇತ್ರದ ಜನತೆಯ ಕೈಗೆ ಸಿಗದೆ ವರ್ಷಕ್ಕಮ್ಮೆ ಮುಖ ತೋರಿಸುವಂತ ಈ ಸಂಸದೇ ಯ ವಿರುದ್ಧ ಬಿಜೆಪಿಯ ಕಾರ್ಯಕರ್ತರೇ ತೀರುಗಿ ಬಿದ್ದಿದ್ದಾರೆ ಹಾಗಾದರೆ ಉಳಿದ ಮತದಾರರ ಪಾಡೇನು ಎಂದು ಪ್ರಶ್ನಿಸಿದ್ದಾರೆ. ಕೇವಲ ಮೋದಿಯ ಹೆಸರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂಬುದು ಇವರ ತಲೆಯಲ್ಲಿ ತುಂಬಿಹೋಗಿದೆ ಅದಕ್ಕಾಗಿ ಸುಲಭದಲ್ಲಿ ತಾವು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಯೋಚನೆಯಲ್ಲಿ ಇದ್ದಾರೆ. ಆ ಕಾರಣಕ್ಕಾಗಿ ಇಲ್ಲಿ ಬಿಜೆಪಿ ಟಿಕೆಟ್ ಗಾಗಿ ಫೈಟ್ ನಡೆದಿದೆ ಇದನ್ನು ನಮ್ಮ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮತದಾರರು ಗಮನಿಸಬೇಕಾಗಿದೆ ಎಂದು ಹೇಳಿದ್ದಾರೆ.
ಅಭಿವೃದ್ಧಿಯ ಕಡೆಗೆ ತಲೆಕೊಡದೆ ಬೆಲೆ ಏರಿಕೆಯ ಬಗ್ಗೆ ಕಿಂಚಿತ್ತು ಬಾಯ್ ಬಿಡದೆ ಕ್ಷೇತ್ರದ ಜನತೆಗೆ ಸರಿಯಾಗಿ ಸಿಗದೇ ಕೇವಲ ಮೋದಿ ಮೋದಿ ಎಂದು ಹೇಳುವ ಈ ಬಿಜೆಪಿಯ ಅಭ್ಯರ್ಥಿಯನ್ನು ಈ ಬಾರಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಮತದಾರರು ಸೋಲಿಸಿ ಐದು ಗ್ಯಾರಂಟಿಗಳ ಕೊಡುಗೆಯನ್ನು ನೀಡಿದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಪಕ್ಷ ನೀಡುವ ಗ್ಯಾರಂಟಿಗಳು ನಮಗೆಲ್ಲರಿಗೂ ಸಿಗುವಂತೆ ಮಾಡಬೇಕು. ಈ ಬೆಲೆ ಏರಿಕೆ ನೀತಿಯಿಂದ ಕಂಗೆಟ್ಟ ಜನಸಾಮಾನ್ಯರಿಗೆ ಕಾಂಗ್ರೆಸ್ ಪಕ್ಷವು ಆಸರೆಯಾಗಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ನಮ್ಮ ಕ್ಷೇತ್ರದ ಜನರು ಗೆಲ್ಲಿಸುವಂತಾಗಬೇಕೆಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Correctly said. Thanks.