ಕುಂದಾಪುರ:ಜನರಲ್ ಸ್ಟೋರ್ ನಲ್ಲಿ 1.20 ಲ. ರೂ ನಗ-ನಗದು ಕಳವು
ಕುಂದಾಪುರ ಫೆ.24(ಉಡುಪಿ ಟೈಮ್ಸ್ ವರದಿ): ಖಾರ್ವಿಕೇರಿ ರಸ್ತೆಯಲ್ಲಿರುವ ಜನರಲ್ ಸ್ಟೋರ್ ವೊಂದರಲ್ಲಿ 1.20 ಲ. ರೂ ನಗ-ನಗದು ಕಳವು ಗೈದಿರುವ ಘಟನೆ ನಡೆದಿದೆ.
ಕುಂದಾಪುರದ ಕಸಬಾ ಗ್ರಾಮದ ಸುಭಾಸ ಎಂಬವರ ಖಾರ್ವಿಕೇರಿ ರಸ್ತೆಯಲ್ಲಿರುವ ಜನರಲ್ ಸ್ಟೋರ್ ನಲ್ಲಿ ಕಳ್ಳತನ ನಡೆದಿದೆ. ಫೆ.23 ರಂದು ರಾತ್ರಿ ಸುಭಾಸ್ ಅವರು ಅಂಗಡಿಯನ್ನು ಮುಚ್ಚಿ ಸೆಟರ್ ಬಾಗಿಲಿನ ಎರಡು ಬದಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶೆಟರ್ ನ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದು ಕಂಡು ಬಂದಿದ್ದು, ಅಂಗಡಿಯ ಒಳಗೆ ಹೋಗಿ ನೋಡಿದಾಗ ಕ್ಯಾಶ್ ಡ್ರಾಯರಿನಲ್ಲಿದ್ದ 1,00,000/- ರೂ. ನಗದು ಹಾಗೂ 20,000/- ಮೌಲ್ಯದ 4 ಗ್ರಾಂ ಚಿನ್ನದ ಸರ ಕಳ್ಳತನ ವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.