ಗಂಗೊಳ್ಳಿ: ಪಾರ್ಟ್ ಟೈಮ್ ಜಾಬ್ ಆಮೀಷ-ಮಹಿಳೆಗೆ 4.69 ಲ.ರೂ ವಂಚನೆ

ಗಂಗೊಳ್ಳಿ ಫೆ.22(ಉಡುಪಿ ಟೈಮ್ಸ್ ವರದಿ): ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 4.69 ಲ.ರೂ ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ವಂಚನೆಗೆ ಒಳಗಾದ ಅಫ್ರೀನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಫೆ.3 ರಂದು ಇವರ ಮೊಬೈಲ್‍ಗೆ ಹೆಚ್.ಆರ್ ದಿವ್ಯಾ ಬೆಂಗಳೂರು ಎಂಬ ಹೆಸರಿನಲ್ಲಿ ಅಪರಿಚಿತ ವಾಟ್ಸಾಪ್ ಮೆಸೇಜ್ ಬಂದಿತ್ತು. ಆ ಮೆಸೇಜ್‍ನಲ್ಲಿ ಪಾರ್ಟಟೈಮ್ ಜಾಬ್ ಬಗ್ಗೆ ಮಾಹಿತಿ ನೀಡಿ ಲಿಂಕಗಳನ್ನು ಕಳುಹಿಸಿ ಟಾಸ್ಕ್‍ಗಳನ್ನು ನೀಡಲಾಗಿತ್ತು. ಹಾಗೂ ಟಾಸ್ಕ್‍ಗಳಿಗಾಗಿ ಹಣ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ಅಫ್ರೀನ್ ಅವರು ಫೆ.3 ರಿಂದ ಫೆ.14 ರ ವರೆಗೆ ಹಂತ ಹಂತವಾಗಿ ಒಟ್ಟು 5,26,731/- ರೂ.ನ್ನು ಜಮೆ ಮಾಡಿದ್ದರು. ಈ ನಡುವೆ ಅಫ್ರೀನ್ ಅವರ ಖಾತೆಗೆ 57,201/- ರೂ. ವಾಪಾಸ್ಸು ಜಮೆ ಮಾಡಿದ್ದರು. ಆದರೆ ಉಳಿದ 4,69,530/- ರೂ.ನ್ನು ನೀಡದೇ ಲಕ್ಸುರಿ ಪ್ರೊಡಕ್ಟ್ ಬರುತ್ತದೆ ಎಂದು ಹೇಳಿ ನಂಬಿಸಿ ವಂಚಿಸಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!