ಮಣಿಪಾಲ: ಎಂಐಟಿಯಲ್ಲಿ ರೇರಾ ಆಕ್ಟ್-2016 ಮಾಹಿತಿ  ಕಾರ್ಯಾಗಾರ

ಮಣಿಪಾಲ ಫೆ.21(ಉಡುಪಿ ಟೈಮ್ಸ್ ವರದಿ): ಸಿವಿಲ್ ಇಂಜಿನೀಯರಿಂಗ್ ವಿಭಾಗದ ವತಿಯಿಂದ “ರೇರಾ ಆಕ್ಟ್-2016 (ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಆಕ್ಟ್) ಕಾನೂನು ಮಾಹಿತಿ  ಕಾರ್ಯಾಗಾರ ಎಂಐಟಿ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ವಕೀಲರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ಈ ಪ್ರಮುಖ ಕಾನೂನಿನ ಹಿನ್ನಲೆ, ಅದರಲ್ಲಿರುವ ಅನೇಕ ಮಹತ್ವದ ನಿಯಮಗಳು, ಗ್ರಾಹಕರ-ಡೆವಲಪರ್ ಗಳ ಹಕ್ಕುಗಳು ಮತ್ತು ಕರ್ತವ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಈ ಸಂದಯ ಸಂಸ್ಥೆಯ ಎಂ.ಟೆಕ್ ಮತ್ತು ಆರ್ಕಿಟೆಕ್ಟ್ ವಿದ್ಯಾರ್ಥಿಗಳು, ವಿವಿಧ ಬ್ಯಾಂಕ್ ಗಳ ಪ್ರತಿನಿಧಿಗಳು, ಅನೇಕ ಡೆವಲಪರ್ ಗಳು  ಹಾಗೂ ಆಸ್ತಿ ಮೌಲ್ಯ ಮಾಪಕರುಗಳು ಭಾಗವಹಿಸಿದ್ದರು. ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ರವೀಂದ್ರನಾಥ್ ಪಿ  ಮತ್ತು ಬಾಲಕೃಷ್ಣ ಮುದ್ದೊಡಿರವರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!