ಮಣಿಪಾಲ: ಎಂಐಟಿಯಲ್ಲಿ ರೇರಾ ಆಕ್ಟ್-2016 ಮಾಹಿತಿ ಕಾರ್ಯಾಗಾರ
ಮಣಿಪಾಲ ಫೆ.21(ಉಡುಪಿ ಟೈಮ್ಸ್ ವರದಿ): ಸಿವಿಲ್ ಇಂಜಿನೀಯರಿಂಗ್ ವಿಭಾಗದ ವತಿಯಿಂದ “ರೇರಾ ಆಕ್ಟ್-2016 (ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಆಕ್ಟ್) ಕಾನೂನು ಮಾಹಿತಿ ಕಾರ್ಯಾಗಾರ ಎಂಐಟಿ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ವಕೀಲರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ಈ ಪ್ರಮುಖ ಕಾನೂನಿನ ಹಿನ್ನಲೆ, ಅದರಲ್ಲಿರುವ ಅನೇಕ ಮಹತ್ವದ ನಿಯಮಗಳು, ಗ್ರಾಹಕರ-ಡೆವಲಪರ್ ಗಳ ಹಕ್ಕುಗಳು ಮತ್ತು ಕರ್ತವ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂದಯ ಸಂಸ್ಥೆಯ ಎಂ.ಟೆಕ್ ಮತ್ತು ಆರ್ಕಿಟೆಕ್ಟ್ ವಿದ್ಯಾರ್ಥಿಗಳು, ವಿವಿಧ ಬ್ಯಾಂಕ್ ಗಳ ಪ್ರತಿನಿಧಿಗಳು, ಅನೇಕ ಡೆವಲಪರ್ ಗಳು ಹಾಗೂ ಆಸ್ತಿ ಮೌಲ್ಯ ಮಾಪಕರುಗಳು ಭಾಗವಹಿಸಿದ್ದರು. ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ರವೀಂದ್ರನಾಥ್ ಪಿ ಮತ್ತು ಬಾಲಕೃಷ್ಣ ಮುದ್ದೊಡಿರವರು ಕಾರ್ಯಕ್ರಮ ನಿರ್ವಹಿಸಿದರು.