ಕೋಟ: ವ್ಯಕ್ತಿ ನಾಪತ್ತೆ
ಕೋಟ ಫೆ.21(ಉಡುಪಿ ಟೈಮ್ಸ್ ವರದಿ): ಚೇರ್ವತ್ತೂರು ಮಡಕಾರ್ ಗೆ ಹೋಗುತ್ತೇನೆ ಎಂದು ಹೇಳಿ ಹೋದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರದ ಕೋಡಿ ಕನ್ಯಾನದ ರಾಜು (52) ನಾಪತ್ತೆಯಾಗಿರುವವರು. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಫೆ.12 ರಂದು ತಮ್ಮ ಹೆಂಡತಿ ಮನೆಯಾದ ಕೋಡಿಕನ್ಯಾನಕ್ಕೆ ಬಂದಿದ್ದರು. ಫೆ.18 ರಂದು ತಮ್ಮ ಪತ್ನಿ ಹಾಗೂ ಮಗನೊಂದಿಗೆ ತಾನು ಚೇರ್ವತ್ತೂರು ಮಡಕಾರ್ ಗೆ ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಚೇರ್ವತ್ತೂರಿನಲ್ಲಿರುವ ಅಣ್ಣಯ್ಯ ಎಂಬವರ ಬಳಿ ವಿಚಾರಿಸಿದಾಗ ರಾಜುರವರು ಈ ವರೆಗೂ ಅಲ್ಲಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಅದರಂತೆ ರಾಜು ರವರು ಚೇರ್ವತ್ತೂರಿಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿದ್ದಾರೆ ಎಂಬುದಾಗಿ ನಾಪತ್ತೆಯಾಗಿರುವ ರಾಜು ಅವರ ಮಗ ನೀಡಿದ ದುರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.