ಕೋಟ: ದಾಸ್ತಾನು ಇಟ್ಟಿದ್ದ ಅಡಿಕೆ ಕಳವು
ಕೋಟ ಫೆ.21(ಉಡುಪಿ ಟೈಮ್ಸ್ ವರದಿ): ಮನೆಯ ಒಳಗೆ ದಾಸ್ತಾನು ಇಟ್ಟಿದ್ದ 80 ಸಾವಿರ ರೂ. ಮೌಲ್ಯದ ಒಣಗಿದ ಅಡಿಕೆ ಕಳ್ಳತನವಾಗಿರುವ ಘಟನೆ ಬ್ರಹ್ಮಾವರದ ಶಿರಿಯಾರ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಸರೋಜಿನಿ ಅವರು, ಫೆ.12 ರಂದು ಒಣಗಿಸಿದ ಅಡಿಕೆಯನ್ನು ಮನೆಯ ಒಳಗಡೆ ಶೇಖರಿಸಿ ಇಟ್ಟಿದ್ದರು. ಆದರೆ ಮರುದಿನ ಬೆಳಿಗ್ಗೆ ಪರಿಶೀಲಿಸಿ ನೋಡಿದಾಗ ಮನೆಯ ಕಡುಮಾಡಿನಲ್ಲಿ ಇಟ್ಟಿದ್ದ 80,000/- ರೂ. ಮೌಲ್ಯದ ಒಟ್ಟು 15 ಚೀಲ ಅಡಿಕೆ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರೋಜಿನಿ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.