ಉಡುಪಿ: ಕೆವೈಸಿ ಅಪ್ಡೇಟ್ ನೆಪದಲ್ಲಿ ವ್ಯಕ್ತಿಗೆ 1.42 ಲ.ರೂ ವಂಚನೆ

ಉಡುಪಿ ಫೆ.21(ಉಡುಪಿ ಟೈಮ್ಸ್ ವರದಿ): ಬ್ಯಾಂಕ್ ಅಧಿಕಾರಿಗಳೆಂದು ನಂಬಿಸಿ ಕೆವೈಸಿ ಅಪ್ಡೇಟ್ ಮಾಡುವ ನೆಪದಲ್ಲಿ ಬ್ಯಾಂಕ್ ದಾಖಲೆಗಳ ವಿವರ ಪಡೆದು 1.42 ಲ.ರೂ ಖಾತೆಯಿಂದ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕೇಶವರಾಯ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇಂದು ಇವರ ತಂದೆ ಮೊಬೈಲಿಗೆ ಕೆವೈಸಿ ಅಪ್ಡೇಟ್ ಮಾಡುವ ಬಗ್ಗೆ ಬಂದ ಮೆಸೇಜ್ ನ್ನು ಬ್ಯಾಂಕ್ ನವರು ಕಳಿಸಿರಬಹುದೆಂದು ನಂಬಿ ಮೆಸೇಜ್‍ನಲ್ಲಿ ಸೂಚಿಸಿದ ನಂಬರಿಗೆ ಕೇಶವರಾಯ ಅವರು ಕರೆ ಮಾಡಿದ್ದರು. ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಕೆವೈಸಿ ಅಪ್‍ಡೇಟ್ ಮಾಡುವ ನೆಪದಲ್ಲಿ ಕೇಶವರಾಯ ಅವರ ತಂದೆಯವರ ಬ್ಯಾಂಕ್ ಖಾತೆಯ ವಿವರ ಹಾಗೂ ಇತರ ದಾಖಲೆಗಳ ಮಾಹಿತಿಯೊಂದಿಗೆ ಓಟಿಪಿ ಪಡೆದು ಕೊಂಡಿದ್ದಾನೆ. ಹಾಗೂ ಆ ಬಳಿಕ ಕೇಶವರಾಯ ಅವರ ತಂದೆಯ ಖಾತೆಯಿಂದ 1,42,000/- ರೂ. ಹಣ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!