ಉಡುಪಿ: ವರ್ಕ್ ಫ್ರಂ ಹೋಂ ಹೆಸರಲ್ಲಿ ಮಹಿಳೆಗೆ 12.85 ಲ.ರೂ ವಂಚನೆ
ಉಡುಪಿ ಫೆ.21(ಉಡುಪಿ ಟೈಮ್ಸ್ ವರದಿ): ವರ್ಕ್ ಫ್ರಂ ಹೋಂನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 12.85 ಲ.ರೂ ವಂಚಿಸಿರುವ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಶ್ವೇತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಟೆಲಿಗ್ರಾಂ ಎಪ್ಲಿಕೇಶನ್ ನಲ್ಲಿ ಶ್ವೇತಾ ಅವರನ್ನು ಅಪರಿಚಿತ ವ್ಯಕ್ತಿಗಳು ಸಂಪರ್ಕಿಸಿ, ವರ್ಕ್ ಫ್ರಂ ಹೋಂ ನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿದ್ದರು. ಹಾಗೂ ನೀಡಿದ ಟಾಸ್ಕ್ ನ್ನು ಪೂರ್ಣಗೊಳಿಸಿ ಬಂದ ಹಣವನ್ನು ಬ್ಯಾಂಕ್ ಖಾತೆಗೆ ಪಾವತಿಸಲು ತಿಳಿಸಿದ್ದರು. ಇದನ್ನು ನಂಬಿದ ಶ್ವೇತಾ ಅವರು ಫೆ.8 ರಿಂದ 16ರ ವರೆಗೆ ಆರೋಪಿಗಳು ಸೂಚಿಸಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 12,85,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿದ್ದರು. ಆದರೆ ಆ ಬಳಿಕ ಆರೋಪಿಗಳು ಟಾಸ್ಕ್ ನಡೆಸಿ ಬಂದ ಹಣ ಹಾಗೂ ಶ್ವೇತಾ ಅವರಿಂದ ಪಡೆದ ಹಣವನ್ನೂ ಹಿಂದುರುಗಿಸದೆ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.