ಮಲ್ಪೆ: ಬೋಟ್‍ನಿಂದ ಬಿದ್ದು ವ್ಯಕ್ತಿ ಮೃತ್ಯು
ಮಲ್ಪೆ ಫೆ.21(ಉಡುಪಿ ಟೈಮ್ಸ್ ವರದಿ): ಬೋಟ್‍ನಿಂದ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಕಮೇಗಂ (52) ಮೃತಪಟ್ಟವರು. ಬೋಟ್ ನಲ್ಲಿ ಕೆಲಸಮಾಡಿಕೊಂಡಿದ್ದ ಇವರು ಫೆ.19 ರಂದು ಬೋಟ್ ನಲ್ಲಿ ಮಲಗಿದ್ದರು ಆದರೆ ಮರುದಿನ ಬೆಳಿಗ್ಗೆ ಬೋಟ್‍ನಲ್ಲಿ ಕಾಣಿಸದ ಕಾರಣ ಅವರನ್ನು ನೀರಿನಲ್ಲಿ ಬಿದ್ದಿರುವ ಬಗ್ಗೆ ಅನುಮಾನಗೊಂಡು ಹುಡುಕಾಡಿದಾಗ ಕಮೇಗಂ ರವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೃತರ ಮಗ ನೀಡಿದ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.