ಬೈಂದೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು
ಬೈಂದೂರು ಫೆ.20(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಕಾಲು ಜಾರಿ ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೈಂದೂರಿನ ನಾವುಂದ ಗ್ರಾಮದ ಬಡಾಕೆರೆ ಮಡಿವಾಳಮಕ್ಕಿ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ವಿಜಯ (54) ಮೃತಪಟ್ಟವರು. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ನಿನ್ನೆ ಬೆಳಿಗ್ಗೆ ಕೆಲಸಕ್ಕೆ ಹೋದವರು ರಾತ್ರಿ ವಾಪಸ್ಸು ಬರುತ್ತಿರುವಾಗ ದಾರಿಯಲ್ಲಿ ಕತ್ತಲಲ್ಲಿ ಮನೆ ಎದುರು ಹೊಸದಾಗಿ ತೋಡಿರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.