ಶಿರ್ವ: ಹೆಚ್ಚಿನ ಲಾಭಾಂಶದ ಆಮಿಷ-ಮಹಿಳೆಗೆ 9.30 ಲ.ರೂ. ವಂಚನೆ

ಶಿರ್ವಾ ಫೆ.20(ಉಡುಪಿ ಟೈಮ್ಸ್ ವರದಿ): ಹೂಡಿಕೆ ಮಾಡಿದರೆ 300 ಮಟ್ಟು ಹೆಚ್ಚು ಹಣ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 9.30 ಲ. ರೂ. ವಂಚಿಸಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

ಠಾಣಾ ವ್ಯಾಪ್ತಿಯ ನಿವಾಸಿ ಮಾಯಾ ಎಂಬವರಿಗೆ  IFME 11 Pantheon ಎಂಬ ವಾಟ್ಸ್‌ಆಫ್‌ ಗ್ರೂಪ್‌ ಮೂಲಕ ಪರಿಚಯಿಸಿಕೊಂಡಿದ್ದ ಮನೋಜ್ ಕುಮಾರ್ ಎಂಬಾತ ಅಸಿಸ್ಟೆಂಟ್ ಮ್ಯಾನೇಜರ್ ಎಂದು ಪರಿಚರಿಸಿಕೊಂಡಿದ್ದ. ಈತ  Asset Management and Account ಇದರ ಬಗ್ಗೆ Treding Account ಎಂದು ಪರಿಚಯಿಸಿದ್ದ. ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಟ್ರೇಡಿಂಗ್ ಆ್ಯಪ್‍ವೊಂದನ್ನು ಡೌನ್‍ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದನ್ನು. ಹಾಗೂ ಹೂಡಿಕೆ ಮಾಡಿದಲ್ಲಿ 300 ಪಟ್ಟು ಹೆಚ್ಚಿನ ಹಣ ಸಿಗುವುದಾಗಿ ನಂಬಿಸಿದ್ದನ್ನು. ಇದನ್ನು ನಂಬಿದ ಮಾಯಾ ಅವರು ಆರೋಪಿ ಸೂಚಿಸಿದ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಟ್ರೇಡಿಂಗ್‍ನಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಹಂತ ಹಂತವಾಗಿ 5,30,000 ರೂ. ಕಳುಹಿಸಿದ್ದರು.

ಫೆ.12 ರಂದು ವಾಟ್ಸ್ ಆಫ್ ಗ್ರೂಪ್ ನಲ್ಲಿ ರಿಟರ್ನ್ ಹಣವನ್ನು ಕೇಳಿದಾಗ 2,21,000 ರೂ. ಮಾಯಾ ಅವರ ಖಾತೆಗೆ ಬಂದಿರುತ್ತದೆ. ಆ ಬಳಿಕ ಹೆಚ್ಚಿನ ಹೂಡಿಕೆ ಮಾಡುವ ಸಲುವಾಗಿ ಮಾಯಾ ಅವರು ಫೆ.14 ರಿಂದ ಹಂತವಾಗಿ ಒಟ್ಟು 9,30,000 ಕಳುಹಿಸಿದ್ದರು. ಈ ನಡುವೆ ರಿಟರ್ನ್ ಹಣವನ್ನು ಕೇಳಿದಾಗ ಆರೋಪಿಗಳು 40% ಪ್ರಾಪಿಟ್ ಕೊಡಿ ಕಂಪೆನಿ ಲಿಕ್ವಿಡೇಟ್ ಮಾಡುತ್ತಾರೆ 2 ವರ್ಕಿಂಗ್ ಡೇಸ್‍ನಲ್ಲಿ ನಿಮ್ಮ ಹಣ ವಾಪಾಸು ಬರುತ್ತದೆ ಎಂದು ವಾಟ್ಸ್ ಆಪ್ ಮೆಸೆಜ್ ಮಾಡಿದ್ದರು. ಇದರಿಂದ ಸಂಶಯಗೊಂಡ ಮಾಯಾ ಅವರು ಅಪ್ಲಿಕೇಶನ್‍ನಲ್ಲಿ ಅಫ್‍ಡೇಟ್‍ನ್ನು ನೋಡಿದಾಗ ಝೀರೋ ಬ್ಯಾಲೆನ್ಸ್ ಇರುವುದು ಗಮನಕ್ಕೆ ಬಂದಿದ್ದು, ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಯಾ ಅವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!