ಉಡುಪಿ: ಫೆ.23-25-ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ “ಬಿಲ್ಡ್ ಟೆಕ್-2024”

ಉಡುಪಿ ಫೆ.20(ಉಡುಪಿ ಟೈಮ್ಸ್ ವರದಿ): ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜೀನಿಯರ್, ಆರ್ಕಿಟೆಕ್ಟ್ ಮತ್ತು ಯು. ಎಸ್. ಕಮ್ಯೂನಿಕೇಶನ್ಸ್ ಬೆಂಗಳೂರು ವತಿಯಿಂದ ಬಿಲ್ಡ್ ಟೆಕ್-2024 ಎಂಬ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಫೆ.23 ರಿಂದ 25 ರ ವರೆಗೆ ಕುಂಜಿಬೆಟ್ಟುವಿನ ಎಂಜಿಎಂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎ.ಸಿ.ಸಿ.ಇ.ಎ.ಯ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ. ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ.23 ರಂದು ಮಧ್ಯಾಹ್ನ 12 ಗಂಟೆಗೆ ಕ್ರಡೈ ಉಡುಪಿ ಇದರ ಅಧ್ಯಕ್ಷರಾದ ಮನೋಹರ್ ಎಸ್. ಶೆಟ್ಟಿ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎ.ಸಿ.ಸಿ.ಇ.ಎ.ಯ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಎ.ಸಿ.ಸಿ.ಇ.ಎ.ಯ ಗೌರವ ಅಧ್ಯಕ್ಷ ನಾಗೇಶ್ ಹೆಗ್ಡೆ, ಮಾಂಡವಿ ಬಿಲ್ಡರ್ಸ್ & ಡೆವಲಪರ್ಸ್ ಡಾ. ಜೆರ್ರಿ ವಿನ್ಸೆಂಟ್ ಡಯಾಸ್, ಉಜ್ವಲ್ ಡೆವಲರ್ಪನ ಪುರುಷೋತ್ತಮ್ ಪಿ. ಶೆಟ್ಟಿ, ಎ.ಸಿ.ಸಿ.ಇ.ಎ.ಯ ಮಾಜಿ ಅಧ್ಯಕ್ಷ ಗೋಪಾಲ್ ಎಂ. ಭಟ್ ಹಾಗೂ ಶಾಂತ ಎಲೆಕ್ಟಿಕಲ್ಸ್ ನ ಶ್ರೀಪತಿ ಭಟ್ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮೂರು ದಿನಗಳ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳು ಇಂಟೀರಿಯರ್ಸ್, ಎಕ್ಸ್ಟಿರಿಯರ್ಸ್ ಉತ್ಪಾದನೆಗಳು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಒಂದೇ ಸೂರಿನಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಂಪನಿಗಳ ಡೋರ್ಸ್, ವಿಂಡೋಸ್, ಬಾತ್ ರೂಮ್ ಫಿಟ್ಟಿಂಗ್ಸ್, ಗ್ಲಾಸ್ ಆಂಡ್ ಗ್ಲಾಸ್ ಫಿಟ್ಟಿಂಗ್ಸ್, ಟೈಲ್ಸ್, ಸ್ಯಾನಿಟರಿ ಅಂಡ್ ಪ್ಲಂಬಿಂಗ್, ಸ್ವಿಚ್ಚಸ್ ಆಂಡ್ ಎಲೆಕ್ಟಿಕಲ್ ಫಿಟ್ಟಿಂಗ್ಸ್, ಕನ್ಸ್‍ಟ್ರಕ್ಷನ್ ಟೆಕ್ನಾಲಜೀಸ್, ಸೋಲಾರ್ ಪ್ರೋಡಕ್ಟ್ಸ್ ಫ್ಲೋರಿಂಗ್ ಮತ್ತು ರೂಫಿಂಗ್‍ಗೆ ಸಂಬಂಧಿಸಿದ ಉತ್ಪನ್ನಗಳು, ಪೇಂಟ್ಸ್ ಮತ್ತು ವಾಟರ್ ಪ್ರೂಫ್ ಕೆಮಿಕಲ್ಸ್, ಸ್ಟೀಲ್, ಸಿಮೆಂಟ್, ಫ್ಲೈವುಡ್, ಸೇಫ್ಟಿ ಮತ್ತು ಮೆಶಿನರಿ ಇಕ್ಯೂಪ್ ಮೆಂಟ್ಸ್ ಎಲಿವೇಟರ್ಸ್ ಮೋದಲಾದವುಗಳ ಬಗ್ಗೆ ಮಾಹಿತಿ ಈ ಪ್ರದರ್ಶನದಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಹೋಂ ಲೋನ್‍ಗಳ ಬಗ್ಗೆ ನಿಖರವಾದ ಮಾಹಿತಿ ನೀಡಲು ಪ್ರತಿಷ್ಠಿತ ಬ್ಯಾಂಕ್‍ಗಳು ಕೂಡ ಇಲ್ಲಿ ಪಾಲ್ಗೊಳ್ಳುತ್ತಿವೆ. ಇನ್ನು ಇಂಟೀರಿಯರ್ ಸಲುವಾಗಿ ವಿವಿಧ ಸೋಫಾ ಮತ್ತು ಡೈನಿಂಗ್ ಟೇಬಲ್ ಕಿಚನ್ ಸೆಟ್ ಮುಂತಾದವುಗಳನ್ನು ನೋಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ತಾಲೂಕುಗಳಿಂದ ಇಂಜಿನಿಯರ್ಸ್‍ಗಳು, ಕಾಂಟ್ರಾಕ್ಟರ್ಸ್, ಬಿಲ್ಡರ್ಸ್ ಅಂಡ್ ಡೆವಲಪರ್ಸ್, ಕಟ್ಟಡ ಸಾಮಗ್ರಿಗಳ ಉತ್ಪಾದಕರು ಮತ್ತು ಮಾರಾಟಗಾರರು, ಮೇಸನ್ಸ್, ಪೇಂಟರ್ಸ್, ಪ್ಲಂಬರ್ಸ್, ಟೈಲ್ಸ್ ಫಿಟ್ಟರ್, ಬಾರ್ ಬೆಂಡೆರ್ಸ್ ಅಂಡ್ ಸೆಂಟ್ರಿಂಗ್ ಕಾರ್ಪೆಟರ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸುತ್ತ ಮುತ್ತಲಿನ ಜಿಲ್ಲೆಗಳಿಂದ ಹೆಸರಾಂತ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ಸ್‍ಗಳನ್ನು ಕೂಡ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ವಸ್ತು ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಇರುತ್ತದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆ ಸದೃಢ ಸುಂದರ ಮನೆ ಕಟ್ಟುವ ಕನಸನ್ನು ನನಸಾಗಿಸಿ ಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎ.ಸಿ.ಸಿ.ಇ.ಎ.ಯ ಮಾಜಿ ಅಧ್ಯಕ್ಷ ಗೋಪಾಲ್ ಎಂ. ಭಟ್ , ಕಾರ್ಯದರ್ಶಿ ಯೋಗೀಶ್ ಚಂದ್ರ , ಉಮಾಪತಿ, ಶಾಂತ ಎಲೆಕ್ಟಿಕಲ್ಸ್ ನ ಶ್ರೀಪತಿ ಭಟ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!