ಉಡುಪಿ: ಮನೆ ಹಿಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು
ಉಡುಪಿ ಫೆ.19 (ಉಡುಪಿ ಟೈಮ್ಸ್ ವರದಿ): ಮನೆಯ ಹಿಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳರು ಕದ್ದಿರುವ ಘಟನೆ ಉಡುಪಿಯ ಅಜ್ಜರಕಾಡುವಿನಲ್ಲಿ ನಡೆದಿದೆ.
ವಾಹನ ಚಾಲಕರಾಗಿರುವ ಅಜ್ಜರಕಾಡುವಿನ ಶಶಿಕಾಂತ್ ನಾರಾಯಣ ಸಾಲಿಯಾನ್ ಅವರು ತಮ್ಮ ದ್ವಿಚಕ್ರ ವಾಹನವನ್ನು ಮನೆಯ ಹಿಂದೆ ನಿಲ್ಲಿಸಿದ್ದರು. ಫೆ.17 ರಂದು ಬೆಳಿಗ್ಗೆ ತಮ್ಮ ದ್ವಿಚಕ್ರ ವಾಹನವನ್ನು ಅವರು ನೋಡಿದ್ದು, ಆ ಬಳಿಕ ಕೆಲಸಕ್ಕೆ ಹೋಗಿದ್ದರು. ಆ ನಂತರ ತಮ್ಮ ಕೆಲಸ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಹಿಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.