ಕಾರ್ಕಳ: ದಾಸ್ತಾನು ಇರಿಸಿದ್ದ 120 ಕೆ.ಜಿ ಕಾಳು ಮೆಣಸು ಕಳವು
ಕಾರ್ಕಳ ಫೆ.13 (ಉಡುಪಿ ಟೈಮ್ಸ್ ವರದಿ): ತೋಟದ ಶೆಡ್ನಲ್ಲಿ ಇರಿಸಿದ್ದ 120 ಕೆ.ಜಿ ಕಾಳು ಮೆಣಸನ್ನು ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದ ವೆಂಕಟೇಶ ಮಯ್ಯ ಎಂಬವರು ತಮ್ಮ ಮನೆಯ ಬಳಿ ಇರುವ ತೋಟದ ಶೆಡ್ನಲ್ಲಿ 3 ಗೋಣಿ ಚೀಲಗಳಲ್ಲಿ ದಾಸ್ತಾನು ಇರಿಸಿದ್ದ ಸುಮಾರು 120 ಕೆ.ಜಿ. ತೂಕದ ಅಂದಾಜು 60,000/- ರೂ. ಮೌಲ್ಯದ ಕಾಳು ಮೆಣಸನ್ನು ಫೆ.3 ರಿಂದ ಫೆ.11 ರ ನಡುವಿನ ಅವಧಿಯಲ್ಲಿ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.