ವಿಶ್ವ ಕ್ಯಾನ್ಸರ್ ದಿನ: ಕೆಎಂಸಿ ಆವರಣದಲ್ಲಿ ಜಲವರ್ಣ ಕಲಾಕೃತಿ
ಮಣಿಪಾಲ ಫೆ.7 (ಉಡುಪಿ ಟೈಮ್ಸ್ ವರದಿ) ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬಿಟ್ಟು ಇವರು ಡಾ. ರಂಜಿತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ಆಸ್ಪತ್ರೆಯ ಇಂಟರಾಕ್ಟ್ ಆವರಣದಲ್ಲಿ ಬೃಹತ್ ಜಲವರ್ಣ ಕಲಾಕೃತಿಯನ್ನು ರಚಿಸಿದರು.
ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಈ ಕಲಾಕೃತಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.