ವಿಶ್ವ ಕ್ಯಾನ್ಸರ್ ದಿನ: ಕೆಎಂಸಿಯಿಂದ ಮಾನವ ಸರಪಳಿಯ ಮೂಲಕ ಅಪ್ರತಿಮ ಕ್ಯಾನ್ಸರ್ ಜಾಗೃತಿ ರಿಬ್ಬನ್
ಮಣಿಪಾಲ ಫೆ.6 (ಉಡುಪಿ ಟೈಮ್ಸ್ ವರದಿ): ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಹಯೋಗದೊಂದಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಯಿತು.
ಮಾನವ ಸರಪಳಿಯ ಮೂಲಕ ಐಕಾನಿಕ್ ಕ್ಯಾನ್ಸರ್ ಜಾಗೃತಿ ರಿಬ್ಬನ್ ಅನ್ನು ರೂಪಿಸುವ ಮೂಲಕ ವೈದ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಕ್ಯಾನ್ಸರ್ ಸುತ್ತಲಿನ ಮೂಢನಂಬಿಕೆಗಳು ಮತ್ತು ತಪ್ಪುಗ್ರಹಿಕೆಗಳನ್ನು ಹೋಗಲಾಡಿಸುವ ಮತ್ತು ಕ್ಯಾನ್ಸರ್ ಕಾಯಿಲೆಯ ಚಿಹ್ನೆಗಳು, ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ವೇಳೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಮಣಿಪಾಲ್ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಹಯೋಗದೊಂದಿಗೆ ರೂಪಿಸಿದ ಮಾನವ ಸರಪಳಿ ರಚನೆಯು ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ, ಇದು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ತಡೆಗಟ್ಟುವ ಸಂಸ್ಕøತಿಯನ್ನು ಬೆಳೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ಪ್ರತಿ ವರ್ಷ, ಫೆ.4 ರಂದು ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ಕಾಯಿಲೆಯ ಕುರಿತು ತಿಳುವಳಿಕೆ ಮತ್ತು ಅಗತ್ಯ ಕ್ರಮವನ್ನು ಉತ್ತೇಜಿಸಲು ಜಾಗತಿಕ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಮುಂಜಾಗ್ರತೆ ಕ್ರಮಗಳು, ಸಕಾಲದಲ್ಲಿ ತಪಾಸಣೆ, ಆರಂಭಿಕ ಪತ್ತೆ, ಉತ್ತಮ ಚಿಕಿತ್ಸೆ ಮತ್ತು ಉಪಶಾಮಕ ಆರೈಕೆಗಾಗಿ ಪುರಾವೆ ಆಧಾರಿತ ತಂತ್ರಗಳನ್ನು ಅನುಷ್ಠಾನಗೊಳಿಸುವ ಮೂಲಕ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು ಮತ್ತು ನಿಯಂತ್ರಿಸಬಹುದಾಗಿದೆ.