ಬ್ರಹ್ಮಾವರ: ಆರತಕ್ಷತೆ ಸಮಾರಂಭದಲ್ಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಇದ್ದ ಬ್ಯಾಗ್ ಕಳವು
ಬ್ರಹ್ಮಾವರ ಫೆ.5 (ಉಡುಪಿ ಟೈಮ್ಸ್ ವರದಿ): ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಮಗಳೊಂದಿಗೆ ಫೋಟೋ ತೆಗೆದುಕೊಂಡು ಬರುವಷ್ಟರಲ್ಲಿ ತಾಯಿಯ 2.40 ರೂ. ಮೌಲ್ಯದ ವಸ್ತು ಮತ್ತು ನಗದು ಇದ್ದ ಬ್ಯಾಗ್ ಕಳ್ಳತನ ನಡೆದಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಬ್ರಹ್ಮಾವರದ ಹೇರೂರು ಗ್ರಾಮದ ಸಭಾಂಗಣವೊಂದರಲ್ಲಿ ಜಯಶ್ರೀ ಸುರೇಶ್ ನೀಲಾವರ ಇವರ ಮಗಳ ಮದುವೆಯ ಆರತಕ್ಷತೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ರಾತ್ರಿ 8:50ರ ಸುಮಾರಿಗೆ ಕೈಯಲ್ಲಿ ಹಿಡಿದಿದ್ದ ಬ್ಯಾಗ್‍ನ್ನು ಹಾಲ್ ಸ್ಟೇಜ್ ನ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿದ್ದರು. ಬಳಿಕ ಬಂದು ನೋಡಿದಾಗ ಕುರ್ಚಿಯ ಮೇಲಿಟ್ಟಿದ್ದ ಬ್ಯಾಗ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಕಳವಾದ ಬ್ಯಾಗ್ ನಲ್ಲಿ ಒಟ್ಟು 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳು ಇತ್ತು ಎಂಬುದಾಗಿ ಜಯಶ್ರೀ ಸುರೇಶ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.