ಬೈಂದೂರು: ಮನೆಯವರಿಗೆ ತಲವಾರು ಝಳಪಿಸಿ 3 ದನಗಳ ಕಳವು
ಬೈಂದೂರು ಫೆ.3 (ಉಡುಪಿ ಟೈಮ್ಸ್ ವರದಿ): ಕೊಟ್ಟಿಗೆಗೆ ನುಗ್ಗಿ ಮನೆಯವರಿಗೆ ತಲವಾರು ಝಳಪಿಸಿ ಬೆದರಿಸಿ ಮೂರು ದನಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಇಂದು ನಸುಕಿನ ಜಾವ ಬೈಂದೂರಿನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 1.30 ರ ಸುಮಾರಿಗೆ ಸತೀಶ್ ಯಡ್ತರೆ ಎಂಬವರು ತಮ್ಮ ಮನೆಯ ಕೊಟ್ಟಿಗೆಯ ಬಾಗಿಲಿನ ಶಬ್ದ ಕೇಳಿ ಎಚ್ಚರಗೊಂಡು ಹೊರಗಡೆ ಬಂದು ನೋಡಿದಾಗ ಕೊಟ್ಟಿಗೆಯ ಒಳಗಡೆ ನಾಲ್ಕೈದು ಜನರ ತಂಡ ಇದ್ದು, ಸತೀಶ್ ಅವರನ್ನು ಕಂಡ ಆರೋಪಿಗಳು ತಳವಾರು ಝಳಪಿಸಿ ಬೆದರಿಸಿದ್ದಾರೆ. ಈ ವೇಳೆ ಸತೀಶ್ ಅವರು ಹೆದರಿ ಮನೆಯ ಒಳಗಡೆ ಹೋಗಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಕೊಟ್ಟಿಗೆಯಲ್ಲಿದ್ದ 5 ದನಗಳ ಪೈಕಿ 12.000 ರೂ. ಮೌಲ್ಯದ 1 ದನವನ್ನು ಕದ್ದುಕೊಂಡು ಹೋಗಿರುವುದು ಕಂಡು ಬಂದಿದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಾಗೂ ಇವರ ಮನೆಯ ಸಮೀಪದಲ್ಲೇ ಇರುವ ಇವರ ಸಂಬಂಧಿ ಭರತ್ ಎಂಬವರ ಒಂದು ಶೆಡ್ ನಲ್ಲಿ 15 ದನಗಳ ಪೈಕಿ 28,000 ರೂ. ಮೌಲ್ಯದ 2 ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಸತೀಶ್ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.