ಕಾಪು: ದೇವಸ್ಥಾನಕ್ಕೆಂದು ಹೋದ ಮಹಿಳೆ ನಾಪತ್ತೆ
ಕಾಪು ಫೆ.1 (ಉಡುಪಿ ಟೈಮ್ಸ್ ವರದಿ): ದೇವಸ್ಥಾನಕ್ಕೆಂದು ಹೋದ ಮಹಿಳೆಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪುವಿನ ಉದ್ಯಾವರ ಗ್ರಾಮದ ನೇತ್ರಾವತಿ (55) ಎಂಬವರು ಕಾಣೆಯಾಗಿದ್ದಾರೆ. ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಬರುವ ಅಭ್ಯಾಸ ಹೊಂದಿದ್ದ ಅವರು ಎಂದಿನಂತೆ ಜ.30 ರಂದು ಬೆಳಿಗ್ಗೆ ಮನೆಯಿಂದ ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಈವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಇವರನ್ನು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.