ಸ್ವಾವಲಂಬನೆಯ ಬಜೆಟ್- ಕೆ.ಉದಯ ಕುಮಾರ್ ಶೆಟ್ಟಿ

ಉಡುಪಿ: ಈ ಬಜೆಟ್ ಬಡವರ ಬದುಕಿಗೆ ಆಸರೆಯಾಗಿದೆ. ಮುಂದಿನ ಐದು ವರ್ಷದ ಅವಧಿಯಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 3 ಕೋಟಿ ಮನೆ ನಿರ್ಮಾಣವು ಬಡ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ.

1 ಕೋಟಿ ಮನೆಗೆ ಸೋಲಾರ್ ಅಳವಡಿಕೆ ವಿದ್ಯುತ್ ಕೊರತೆಯನ್ನು ನೀಗಿಸುತ್ತದೆ. ರೈತರಿಗೆ ಕಡಿಮೆ ಬಡ್ಡಿ ಹಾಗೂ ಶೂನ್ಯ ಬಡ್ಡಿ ಸಾಲ ಇದು ರೈತರಿಗೆ ಸಹಾಯವಾಗಲಿದೆ.

“ಲಕ್ ಪತಿ ದೀದಿ”, ಯೋಜನೆ 9 ಕೋಟಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿದೆ. ಯಾವುದೇ ಕ್ಷೇತ್ರದ ಅನುದಾನ ಕಡಿತಗೊಳಿಸದೆ ಜನರ ಬದುಕಿಗೆ ಬೆಂಬಲವಾಗಿ ಸರಕಾರ ನಿಂತಿರುವುದು ಈ ಬಜೆಟ್ ನಿಂದ ವ್ಯಕ್ತವಾಗುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್ ಕುಮಾರ್ ಶೆಟ್ಟಿ ಇವರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!