ನಂದಳಿಕೆ: ದೇವಸ್ಥಾನದ ಟ್ಯಾಂಕ್ ಕುಸಿದು ಪಂಚಾಯತ್ನ ಮಾಜಿ ಅಧ್ಯಕ್ಷೆ ಮೃತ್ಯು- ಮಗಳು ಗಂಭೀರ
ಬೆಳ್ಮಣ್ : ಇಲ್ಲಿನ ನಂದಳಿಕೆ ದೇವಸ್ಥಾನದಲ್ಲಿ ಊಟ ಮಾಡಿದ ಬಳಿಕ ಪ್ಲೇಟನ್ನು ಬಿಸಾಡಲು ಹೋಗಿದ್ದಾಗ ದೇವಸ್ಥಾನದ ಹಿಂಬದಿಯ ನೀರಿನ ಟ್ಯಾಂಕ್ ಕುಸಿದು ಪಂಚಾಯತ್ನ ಮಾಜಿ ಅಧ್ಯಕ್ಷೆ ಮೃತಪಟ್ಟಿದ್ದು, ಮಗಳು ಗಂಭೀರವಾಗಿ ಗಾಯಗೊಂಡ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ಜ.30ರಂದು ನಡೆದಿದೆ.
ಶ್ರೀಲತಾ (50)ಮೃತ ದುರ್ದೈವಿ. ನಂದಳಿಕೆ ಗ್ರಾಮದ ಶ್ರೀಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಮಾರಿಪೂಜೆಗೆ ಮಗಳೊಂದಿಗೆ ಹೋಗಿದ್ದರು. ರಾತ್ರಿ ದೇವಸ್ಥಾನದಲ್ಲಿ ಊಟ ಮಾಡಿ, ಊಟ ಮಾಡಿದ ಪ್ಲೇಟನ್ನು ದೇವಸ್ಥಾನದ ಹಿಂಭಾಗದ ನೀರಿನ ಟ್ಯಾಂಕ್ನ ಬಳಿ ಇಡಲು ಹೋದಾಗ, ದೇವಸ್ಥಾನದ ಹಿಂಭಾಗದಲ್ಲಿದ್ದ ನೀರಿನ ಟ್ಯಾಂಕ್ ಆಕಸ್ಮಿಕವಾಗಿ ಕುಸಿದು ಶ್ರೀಲತಾ ಮತ್ತು ಪೂಜಾ ಇವರ ಮೈಮೇಲೆ ಬಿದ್ದಿದೆ.
ಘಟನೆಯಿಂದ ಶ್ರೀಲತಾರವರು ತೀವೃ ಗಾಯ ಗೊಂಡಿದ್ದರು.ತಕ್ಷಣ ಅವರನ್ನು ಅಂಬುಲೆನ್ಸ್ ವಾಹನದಲ್ಲಿ ಕುಳ್ಳಿರಿಸುವಾಗಲೇ ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಮಗಳು ಪೂಜಾರರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.