ಪ್ರೊ.ಮೆಲ್ವಿನ್ ಪೆರ್ನಾಲ್‌ರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ

ಉಡುಪಿ: ನಿಟ್ಟೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮೆಲ್ವಿನ್ ಕ್ಯಾಸ್ತಲಿನೊ ಪೆರ್ನಾಲ್ ಇವರು ಬರೆದಿರುವ “Optimization of Equal Channel Angular Pressing Process for improved Properties of a Biomedical Material and Experimental Validation” ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವಯ್ಯ ತಾಂತ್ರಿಕ ವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದು ಸಾಧನೆ ಮಾಡಿರುತ್ತಾರೆ.

ಈ ಮೊದಲು ಅವರು ಕೆಪಿಟಿಯಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿ ಲ್ಯಾಬ್ ಟೆಕ್ನಿಶೀಯನ್ ಆಗಿ ಸೇವೆಗೆ ಸೇರಿದ್ದು, ಬಳಿಕ ಪಿಎ ಇಂಜಿನಿಯರಿಂಗ್ ಕಾಲೇಜು ಹಾಗೂ ಸಹ್ಯಾದ್ರಿ ಇಂಜಿನಿಯರಿಂತ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿ 2011 ರಲ್ಲಿ ಇಂಜಿನಿಯರಿಂಗ್ ಪದವಿ ಮೊದಲ ರ್ಯಾoಕ್ ನಲ್ಲಿ ಮುಗಿಸಿದ್ದಾರೆ.

ಬಂಟಕಲ್ ಮಧ್ವವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಇವರು ಬಳಿಕ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟೆಕ್ ಪದವಿಯನ್ನು 2014ರಲ್ಲಿ ಪಡೆದರು. ಪ್ರಸ್ತುತ ಪಿಹೆಚ್‌ಡಿ ಪದವಿಯನ್ನು ಪಡೆದಿದ್ದು, ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಾಧ್ಯಾಪಕ ಹುದ್ದೆಯೊಂದಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರುವ ಮೆಲ್ವಿನ್ ಕ್ಯಾಸ್ತಲಿನೊ ಅವರು ಉತ್ತಮ ಬರಹಗಾರರಾಗಿದ್ದು ಅವರ ಲೇಖನ, ಕಥೆ, ಕವಿತೆಗೆಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮಾತ್ರವಲ್ಲದೆ ಹಾಸ್ಯದ ಮೂಲಕವೂ ಹಲವು ನಾಟಕ ಮತ್ತು ಹಾಸ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಅವರು ಅತ್ಯುತ್ತಮ ವಾಲಿಬಾಲ್ ಪಟು ಕೂಡ ಹೌದು.

1 thought on “ಪ್ರೊ.ಮೆಲ್ವಿನ್ ಪೆರ್ನಾಲ್‌ರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ

  1. Congrats and Best wishes to you Melwyn Sir
    God bless All your Desires ahead,
    You have brought Laurels to our Credits

Leave a Reply

Your email address will not be published. Required fields are marked *

error: Content is protected !!