ಕುಂದಾಪುರ: ಮುಸುಕುಧಾರಿಗಳಿಂದ ಆಭರಣ ಮಳಿಗೆಗೆ ನುಗ್ಗಲು ಯತ್ನ

ಕುಂದಾಪುರ, ಜ.1: ಮುಸುಕುಧಾರಿ ದರೋಡೆಕೋರರ ತಂಡವೊಂದು ಶುಕ್ರವಾರ ತಡರಾತ್ರಿ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಶಾನುಭೋಗ್ ಕಾಂಪ್ಲೆಕ್ಸ್‌ನ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇತ್ತೀಚಿಗೆ ಉಡುಪಿಯ ಸಂತೆಕಟ್ಟೆ ಹಾಗೂ ತೆಕ್ಕಟ್ಟೆ ಕೆನರಾ ಬ್ಯಾಂಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿರುವ ಮೀನಾಕ್ಷಿ ಫರ್ನಿಚರ್ ಶೋರೂಮ್, ಗೋಡೌನ್ ಮತ್ತು ಟೈಲರಿಂಗ್ ಅಂಗಡಿಯಲ್ಲಿ ಇತ್ತೀಚೆಗೆ ಕಳ್ಳತನಕ್ಕೆ ಯತ್ನಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಜ್ಯುವೆಲ್ಲರಿ ಮಾಲಕರು ಪೊಲೀಸರಿಗೆ ದೂರು ನೀಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!